ಕಿಚ್ಚನ ಬರ್ತ್ ಡೇಗೆ ಅಭಿಮಾನಿಗಳಿಗೆ ಸಿಗಲಿದೆ 3 ಭರ್ಜರಿ ಗಿಫ್ಟ್

ಬುಧವಾರ, 30 ಆಗಸ್ಟ್ 2017 (14:10 IST)
ಬೆಂಗಳೂರು: ಸೆಪ್ಟೆಂಬರ್ 2 ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಹುಟ್ಟಿದಹಬ್ಬ. ಆದರೆ ಸುದೀಪ್ ಇನ್ನು ಮುಂದೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಆದರೆ ಅಭಿಮಾನಿಗಳು ಈ ಕಾರಣಕ್ಕೆ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ. ಯಾಕಂದ್ರೆ ಈ ಬಾರಿ ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗಲಿದೆ.

ಈ ಬಾರಿ ಸುದೀಪ್ ಹುಟ್ಟಿದಹಬ್ಬದಂದು `ದಿ ವಿಲನ್’ ಚಿತ್ರತಂಡ ಮೋಶನ್ ಪೋಸ್ಟರ್ ಉಡುಗೊರೆಯಾಗಿ ರಿಲೀಸ್ ಮಾಡಲಿದೆ. ರಾತ್ರಿ 12ಕ್ಕೆ ಈ ಮೋಶನ್ ಪೋಸ್ಟರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

`ರಾಜು ಕನ್ನಡ ಮೀಡಿಯಂ’ ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ `ರಾಜು ಕನ್ನಡ ಮೀಡಿಯಂ’ ಚಿತ್ರತಂಡ ಸಹ ಟೀಸರ್ ಬಿಡುಗಡೆ ಮಾಡಲಿದೆ. ಇನ್ನು ಹೆಬ್ಬುಲಿ ನಿರ್ದೇಶಕ ಕೃಷ್ಣ ನಿರ್ದೇಶನದ ಹೊಸ ಸಿನಿಮಾದ ಮೊದಲ ಪೋಸ್ಟರ್ ಸಹ ಅಂದೇ ರಿಲೀಸ್ ಆಗಲಿದೆ. ಈಗಾಗಲೇ ಫೋಟೊಶೂಟ್ ಮುಗಿದಿದ್ದು, ಬಾಕ್ಸಿಂ‍ಗ್ ಕುರಿತಾದ ಚಿತ್ರ ಇದಾಗಿದೆ.

ಒಟ್ಟಿನಲ್ಲಿ ಸುದೀಪ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರೂ ಸಹ, ಅಭಿಮಾನಿಗಳಿಗೆ ಮಾತ್ರ ಭರ್ಜರಿ ಗಿಫ್ಟ್ ನೀಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ