ನಾನು ಮಲಗಬೇಕು

WD
ಪುಟ್ಟ ಆನೆಮರಿ ಬಹಾದುರ ಬಹಳ ಮರೆಯುವ ಮಗು. ಒಂದು ಸಲ ಅವನು ನೀರು ಕುಡಿಯುವುದು ಹೇಗೆ ಎಂಬುದನ್ನೇ ಮರೆತಿದ್ದ. ನೀರು ಕುಡಿಯಲು ನಿನ್ನ ಮೂಗು ಉಪಯೋಗಿಸಬೇಕು ಮಗೂ ಎಂದು ಅವನ ಅಮ್ಮ ಅವನಿಗೆ ಹೇಳಿದ್ದಳು.

ಈ ಸಲ ಬಹಾದುರನ ಅಮ್ಮ ಗೀತಾ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದರು. ಪುಟ್ಟ ಬಹಾದುರನಿಗೆ ಬಹಳ ನಿದ್ದೆ ಆದರೆ ನಿದ್ದೆ ಮಾಡುವುದು ಹೇಗೆ ಎಂಬುದೇ ನೆನಪು ಬರುತ್ತಿಲ್ಲ.

ತನ್ನ ಕಾಡಿನ ಸ್ನೇಹಿತರ ಹತ್ತಿರ ಸಹಾಯ ಕೇಳೋಣವೆಂದು ಸಿಂಹ ಶಣ್ಮುಗಂ ಹತ್ತಿರ ಹೋದ. ಆದರೆ ಶಣ್ಮುಗಂ ದಿನವೆಲ್ಲಾ ಮಲಗುತ್ತಾನೆ ಆನೆಗಳು ಹಾಗೆಲ್ಲ ಮಲಗುವುದಿಲ್ಲ ಅಂದುಕೊಂಡ ಬಹಾದುರ ಮನ್ನು ಮಂಗನ ಸಹಾಯ ಕೇಳಿದ. ಮನ್ನು ಮಂಗ ಮೇಲೆ ಹತ್ತಿ ಬಾ ಎಂದು ಕರೆದ.

ಆನೆಗಳು ಮರ ಹತ್ತಲಾಗುವುದಿಲ್ಲ ಆನೆಗಳು ಹಾಗೇನು ಮಲಗುವುದಿಲ್ಲ ಎಂದುಕೊಂಡು ಬಹಾದೂರ ರಿತು ಮೊಲದ ಬಳಿಯಲ್ಲಿ ನಾನು ಮಲಗಬೇಕು ಎಂದ. ರಿತು ಮೊಲ ನನ್ನ ಮನೆ ಒಳಗೆ ಬಂದು ಮಲಗು ಎಂದು ತನ್ನ ಬಿಲದೊಳಗೆ ನೂರಿತು.

ಬಹಾದುರ ಬಿಲವನ್ನು ನೋಡಿದ. ಅದರಲ್ಲಿ ನನ್ನ ಸೊಂಡಿಸು ಕೂಡ ಹಿಡಿಸುವುದಿಲ್ಲ ಇಲ್ಲ ಆನೆಗಳು ಹಾಗೇನು ಮಲಗುವುದಿಲ್ಲ ಎಂದುಕೊಂಡ ಬಹಾದುರ ಚಂದು ಮೊಸಳೆಯ ಬಳಿ ನನಗೆ ತುಂಬಾ ನಿದ್ರೆ ಮಲಗಬೇಕು ಎಂದು ಕೇಳಿದ. ಬಾ ನನ್ನ ಜೊತೆ ಈಜು ಎಂದು ಚಂದು ಮೊಸಳೆ ಕರೆಯಿತು.

ನದಿ ಮಧ್ಯದ ಬಂಡೆಯ ಮೇಲೆ ಮಲಗಿದ್ದು ಬಹಾದುರನಿಗೆ ನೆನಪೇ ಬರಲಿಲ್ಲ. ಇಲ್ಲ ಆನೆಗಳು ಹಾಗೆ ಮಲಗುವುದಿಲ್ಲ ಎಂದುಕೊಂಡ ಒಂಟೆ ಕಮಲನಯನ ಬಳಿ ನಾನು ಮಲಗಬೇಕು ಎಂದ. ನನ್ನ ಜೊತೆ ಮರಳಲ್ಲಿ ಮಲಗು ಎಂದು ಕಮಲನಯನ ಹೇಳಿದ.

ಆದರೆ ಮರಳು ನನ್ನ ಸೊಂಡಿಲು, ಕಿವಿಯಲ್ಲೆಲ್ಲಾ ತುಂಬುತ್ತಲ್ಲಾ , ಇಲ್ಲ ಆನೆಗಳು ಹಾಗೇನು ಮಲಗುವುದಿಲ್ಲ ಎಂದು ಯೋಚಿಸಿ ಬಹಾದುರ ಮುಂದೆ ಹೋಗುತ್ತಿದ್ದಾಗ ಹುತೋಕ್ಷಿ ಕುದುರೆ ನಿಂತುಕೊಂಡೇ ಗೊರಕೆ ಹೊಡೆಯುತ್ತಿದ್ದಳು.

ಈಗ ಬಹಾದುರನಿಗೆ ನೆನಪಾಯಿತು. ನಾವು ಆನೆಗಳು ನಿಂತುಕೊಂಡು ಅಥವಾ ಒರಗಿಕೊಂಡು ಮಲಗಬಹುದು ಎಂದು ಬಹಳ ಸಂತೋಷದಿಂದ ಬಹಾದುರ ಒಂದು ಮರಕ್ಕೆ ಒರಗಿ ಗಾಢವಾಗಿ ನಿದ್ರಿಸಿಯೇ ಬಿಟ್ಟ.

ಲೇಖಕಿ ರಾಧಿಕಾ ಚಡ್ಢಾ ಬಹಾದುರ ಆನೆಯ ಪಾತ್ರದ ಮೂಲಕ, ಸಿಂಹ, ಮಂಗ, ಮೊಲ, ಮೊಸಳೆ, ಒಂಟೆ ಮತ್ತು ಕುದುರೆಗಳು ಹೇಗೆ ಮಲಗುತ್ತವೆ ಎಂಬುದನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ.ಅಲ್ಲದೆ ಆನೆಗಳು ದಿನವೆಲ್ಲ ಮಲಗುವುದಿಲ್ಲ, ಮರದ ಮೇಲೆ ಮಲಗುವುದಿಲ್ಲ, ಬಂಡೆಗಳ ಮೇಲೆ ಮಲಗುವುದಿಲ್ಲ, ಮರಳಲ್ಲಿ ಮಲಗುವುದಿಲ್ಲ ಕೇವಲ ನಿಂತುಕೊಂಡೇ ಅಥವಾ ಮರಕ್ಕೆ ಒರಗಿಕೊಂಡೆ ಮಲಗುತ್ತವೆ ಎಂಬುದಾಗಿ ಆನೆಗಳು ಮಲಗುವ ರೀತಿಯನ್ನು ಮಕ್ಕಳಿಗೆ ಈ ಕಥೆಯಮೂಲಕ ತಿಳಿಯಪಡಿಸುತ್ತಾರೆ.

ಪ್ರಿಯಾ ಕುರಿಯನ್ ಅವರ ಚಿತ್ರಗಳು ಮೊಲ, ಸಿಂಹ, ಮೊಸಳೆ, ಕುದುರೆ, ಒಂಟೆ ಮುಂತಾದ ಪ್ರತಿಯೊಂದು ಮಕ್ಕಳು ಪ್ರಾಣಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಅಲ್ಲದೆ ಬಣ್ಣಬಣ್ಣಗಳಿಂದ ಕೂಡಿದ ಈ ಪುಸ್ತಕವು ಮಕ್ಕಳನ್ನು ಆಕರ್ಷಿಸುತ್ತದೆ.

ಪುಸ್ತಕದ ಹೆಸರು: ನಾನು ಮಲಗಬೇಕು

ಪ್ರಕಾಶಕರು: ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18

ಲೇಖಕರು: ರಾಧಿಕಾ ಚಡ್ಢಾ

ಅನುವಾದ: ವಿ.ಆರ್.ದೇವಿಕಾ

ಬೆಲೆ: 95 ರೂಪಾಯಿಗಳು

ವೆಬ್ದುನಿಯಾವನ್ನು ಓದಿ