ಬಣ್ಣ ಬಣ್ಣದ ಕಾಮಿನಿ

WDWD
ಬಹಾದುರ ಆನೆಮರಿಯ ಗೆಳತಿಯಾದ ಕಾಮಿನಿ ಓತಿಕೇತ ಇತರ ಓತಿಕೇತಗಳಾದ ಕವಿತಾ, ಕರಣ್, ಕರೀಂ, ಕೊಂಕಣಾ, ಕೀರ್ತನಾ, ಕಬೀರ್ ಅವರೊಂದಿಗೆ ಬಣ್ಣ ಹೊಂದಿಸಲು ಕಲಿಯುತ್ತಿದ್ದರು.

ನನಗೆ ಕಪಿಲಾ ಆಂಟಿ ಬಂದಾಗ ಬಣ್ಣಹೊಂದಿಸಲು ಬಂದರೆ ಸಾಕು ಬಹಾದುರ್ ಎಂದು ಕಾಮಿನಿ ಬಹಾದುರನಲ್ಲಿ ಹೇಳಿದಳು. ಅಷ್ಟುಹೊತ್ತಿಗೆ ಕಪಿಲಾ ಆಂಟಿ ಬಂದುಬಿಟ್ಟರು.

ಮಕ್ಕಳೇ ಈಗ ಬಣ್ಣ ಹುಡುಕುವ ಸಮಯ, ಮರದಿಂದ ಮರಕ್ಕೆ ಮ್ಯಾಚಿಂಗ್ ಶುರುಮಾಡೋಣ ಎಂದು ಕಪಿಲಾ ಆಂಟಿ ಹೇಳಿದಳು. ಎಲ್ಲಾ ಪುಟ್ಟ ಓತಿಕೇತಗಳು ಮರಹತ್ತಿ ಕೂತವು. ಕಾಮಿನಿಯು ಕೂಡಾ.

ಕಪಿಲಾ ಆಂಟಿ ಹೇಳಿದಳು. ರೆಡೀ, ಗೆಟ್,ಸೆಟ್,ಗೋ... ಕಂದು. ಎಲ್ಲಾ ಓತಿಕೇತಗಳು ಕಂದುಬಣ್ಣಕ್ಕೆ ತಿರುಗಿದಳು. ಆದರೆ ಕಾಮಿನಿಯೊಬ್ಬಳನ್ನು ಬಿಟ್ಟು.ನಿನಗೆ ಹೀಗೆ ಬಣ್ಣ ಬದಲಾಯಿಸಲು ಬರದಿದ್ದರೆ ನೀನು ಹೇಗೆ ಕಾಡಿನಲ್ಲಿ ಓಡುತ್ತೀಯಾ ಎಂದು ಕಪಿಲಾ ಆಂಟಿ ಬೇಸರದಿಂದ ಹೇಳಿದಳು.

ಕಾಮಿನಿಗೆ ತುಂಬಾ ಬೇಜಾರಾಗಿತ್ತು. ಅವಳು ನಂತರ ಬಹಾದುರನಲ್ಲಿ, ನನಗೆ ಬಣ್ಣ ಬದಲಾಯಿಸಲು ತಿಳಿದಿದೆ ಬಹಾದುರ್ ಆದರೆ ಕಪಿಲಾ ಆಂಟಿ ಬಂದಾಗ ನಾನು ಬಣ್ಣ ಬದಲಾಯಿಸಿದರೆ ಕುಶಿಯಿಂದ ಹುಚ್ಚಾಗುತ್ತೇನೆ ಹಾಗಾದಾಗ ನಾನು ಹೊಳೆಯುವ ಬಣ್ಣದವಳಾಗುತ್ತೇನೆ. ನನ್ನ ಎಲ್ಲಾ ಸ್ನೇಹಿತರು ಗೆರೆಗಳಾಗಿ ಚುಕ್ಕಿಗಳಾಗಿ ಬದಲಾಗುತ್ತಾರೆ ಎಂದು ದುಃಖದಿಂದ ಹೇಳಿದಳು.ಬಹಾದುರನಿಗೆ ತನ್ನ ಗೆಳತಿಯ ಕಥೆ ಕೇಳಿ ತುಂಬಾ ಬೇಸರವಾಯಿತು.

ಬಹಾದುರ ಮನೆಗೆ ಹಿಂತಿರುಗಿದಾಗ ಮನೆಯಲ್ಲಿ ಕಪಿಲಾ ಆಂಟಿ ಅಮ್ಮನೊಂದಿಗೆ ಮತ್ತು ಹುತೋಕ್ಷಿ ಕುದುರೆಯೊಂದಿಗೆ ಯುವಕ ಆನೆಗಳು ಬಾಳೆ ತೋಟದ ಸುತ್ತ ಓತಿಕೇತಗಳನ್ನು ತಿಳಿಯುವಂತೆ ಓಡುತ್ತಿರುತ್ತವೆ ಎಂದು ದೂರು ನೀಡುತ್ತಿದ್ದರು.

ಅಮ್ಮ ಇದು ನಿಜವೇ ಎಂದು ಕೇಳಿದಾಗ ಅಕ್ಕ ಮತ್ತು ಅಣ್ಣ ನಮಗೆ ಯಾವ ಓತಿಕೇತಗಳೂ ಕಾಣಿಸಲಿಲ್ಲ ಎಂದು ಹೇಳಿದರು. ಆಗ ಬಹಾದುರ ಓತಿಕೇತಗಳು ಬಣ್ಣ ಹೊಂದಿಸುತ್ತಿದ್ದವು ಹಾಗಾಗಿಯೇ ಅವರು ಕಾಣಿಸಲಿಲ್ಲ ಎಂದನು.

ಓತಿಕೇತಗಳು ಕಣ್ಣಿಗೆ ಬೀಳದಿದ್ದರೆ ಇವರು ಹೇಗೆ ತಾನೆ ಜಾಗ್ರತೆಯಿಂದಿರಲು ಸಾಧ್ಯ ಎಂದು ಅಮ್ಮ ಕಪಿಲಾ ಆಂಟಿಯ ಬಳಿ ಹೇಳಿದರು. ಈಗ ಎಲ್ಲರಿಗೂ ತಲೆಬಿಸಿಯಾಯಿತು.

ಆಗ ಬಹಾದುರ ಒಂದು ಉಪಾಯವನ್ನು ತಿಳಿಸಿದ. ಇದು ಕಾಮಿನಿಯಿಂದ ಸಾಧ್ಯ ಎಂದ.

ಈಗ ಕಾಮಿನಿ ದಿನವೂ ಬಣ್ಣ ಬದಲಾಯಿಸುತ್ತಾ ಕಾವಲು ಕೂರುತ್ತಾಳೆ. ಯಾರಾದರೂ ಬಾಳೇತೋಟಕ್ಕೆ ಬಂದರೆ ಅವಳಿಗೆ ಕುಶಿಯೋ ಕುಶಿ. ಕಾಮಿನಿ ಕುಶಿಗೊಂಡಾಗ ಕೆಂಪು, ಕಂದು, ಹಸಿರು, ಗುಲಾಬಿ, ನೀಲಿ, ಕೇಸರಿ, ಕಪ್ಪು, ನೇರಳೆ ಹೀಗೆ ಬಣ್ಣ ಬಣ್ಣ ಬದಲಾಯಿಸಲು ಶುರುಮಾಡುತ್ತಾಳೆ. ಆಗ ಅಣ್ಣ ಮತ್ತು ಅಕ್ಕ ಅವರನ್ನು ಗುರುತಿಸಿ ಮೆತ್ತಗೆ ಓತಿಕೇತಗಳನ್ನು ತುಳಿಯದಂತೆ ನಡೆಯುತ್ತಾರೆ.

ಈಗ ಯಾರಿಗೂ ಏನೂ ತೊಂದರೆಯಿಲ್ಲವಲ್ಲ ಎಂದು ಕಾಮಿನಿಗೆ, ಕಪಿಲಾ ಆಂಟಿಗೆ, ಅಣ್ಣ ಮತ್ತು ಅಕ್ಕನಿಗೆ ಎಲ್ಲರಿಗೂ ಕುಶಿಯೋ ಕುಶಿ.

ಲೇಖಕಿ ರಾಧಿಕಾ ಛಡ್ಡಾ ಕಾಮಿನಿ ಓತಿಕೇತ ಪಾತ್ರದ ಮೂಲಕ ವಿವಿಧ ಬಣ್ಣಗಳನ್ನು ಮಕ್ಕಳಿಗೆ ಈ ಕಥೆಯಲ್ಲಿ ತಿಳಿಯಪಡಿಸುತ್ತಾರೆ.ಓತಿಕೇತಗಳನ್ನು ಅಣ್ಣಮತ್ತು ಅಕ್ಕ ಬಾಳೆತೋಟದಲ್ಲಿ ಗುರುತಿಸುವಂತೆ ಬಹಾದುರನು ನೀಡುವ ಉಪಾಯವು ಅತ್ಯಂತ ಕುತೂಹಲಕಾರಿಯಾಗಿದ್ದು ಈ ಕಥೆಯನ್ನು ಓದಿಸಿಕೊಂಡು ಹೋಗುತ್ತದೆ.

ಪ್ರಿಯಾ ಕುರಿಯನ್ ಅವರ ಚಿತ್ರವು ಈ ಪುಸ್ತಕಕ್ಕೆ ಮತ್ತಷ್ಟು ಮೆರುಗನ್ನು ನೀಡಿದೆ.

ಪುಸ್ತಕದ ಹೆಸರು: ಬಣ್ಣ ಬಣ್ಣದ ಕಾಮಿನಿ

ಪ್ರಕಾಶಕರು: ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18

ಲೇಖಕರು: ರಾಧಿಕಾ ಚಡ್ಢಾ

ಅನುವಾದ: ಅಶ್ವಿನಿ ಭಟ್

ಬೆಲೆ: 90 ರೂಪಾಯಿಗಳು

ವೆಬ್ದುನಿಯಾವನ್ನು ಓದಿ