ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆ ನೋವು ಸಾಮಾನ್ಯವಾಗಿ ಎಲ್ಲ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯಾಗಿದೆ. ಅದಲ್ಲದೆ ಈ ಸಂದರ್ಭದಲ್ಲಿ ಬೆನ್ನು ನೋವು, ಕಾಲು ನೋವುಗಳು ಕಾಣಿಸಿಕೊಳ್ಳುತ್ತದೆ. ಕೆಲವರು ನೋವಿನ ತೀವ್ರತೆಯಿಂದೆ ವಾಂತಿ, ತಲೆ ಸುತ್ತು ಅಂತಹ ಸಮಸ್ಯೆಯನ್ನು ಅನುಭವಿಸುತ್ತಾರೆ.
ಈ ಲೇಖನದಲ್ಲಿ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವನ್ನು ಹೇಗೆ ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ.
ಬೆಚ್ಚಗಿನ ನೀರಿನಿಂದ ಸ್ಥಾನ ಮಾಡಿ: ಮುಟ್ಟಿನ ಸಂದರ್ಭದಲ್ಲಿ ಕಾಡುವ ವಿಪರೀತದ ಹೊಟ್ಟೆ ನೋವು ದೇಹದ ಇತರ ಭಾಗಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಈ ಸಂದರ್ಭದಲ್ಲಿ ಹದ ಬಿಸಿನೀರಿನಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಸ್ನಾನ ಮಾಡಿ. ಇದರಿಂದ ಮೈ ನೋವಿನಿಂದ ಸ್ವಲ್ಪ ಸುಧಾರಿಸಿಕೊಳ್ಳಬಹುದು.
ಬಿಸಿ ನೀರಿನ ಬಾಟಲ್ ಹಾಗೂ ಬೀಸಿ ನೀರಿನಿಂದ ಅದ್ದಿರುವ ಬಟ್ಟೆಯಿಂದ ಹೊಟ್ಟೆಯ ಭಾಗಕ್ಕೆ ಮಸಾಜ್ ಮಾಡಿ. ಇದರಿಂದ ಹೊಟ್ಟೆನೋವಿನಿಂದ ಸುಧಾರಿಸಿಕೊಳ್ಳಬಹುದು.
ನಿಮ್ಮ ಹೊಟ್ಟೆ ಮತ್ತು ಬೆನ್ನಿನ ಮಸಾಜ್ ಮಾಡಲು ಪ್ರಯತ್ನಿಸಿ. ಇದರಿಂದ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಫೀಲ್ ಮಾಡಬಹುದು.
ನೋವಿನ ಹಿಂದಿರುವ ಕೆಲ ಕಾರಣಗಳು ಹೀಗಿದೆ:
ಈ ಅಪಾಯಗಳು ಸೇರಿವೆ:
11 ವರ್ಷಕ್ಕಿಂತ ಮುಂಚೆ ಋತುಮತಿಯಾಗಿರುವುದು
ಅಮ್ಮ, ಚಿಕ್ಕಮ್ಮ ಹೀಗೆ ಕುಟುಂಬದಲ್ಲೇ ಇದೇ ರೀತಿಯ ಸಮಸ್ಯೆಯಿದ್ದರೆ ಮುಂದುವರೆಯುವ ಸಾಧ್ಯತೆಯಿದೆ
ಮುಟ್ಟಿನ ಜೊತೆಗೆ ಭಾರೀ ರಕ್ತಸ್ರಾವ
ಅನಿಯಮಿತ ಅವಧಿಗಳನ್ನು ಹೊಂದಿರುವುದು
ಮುಟ್ಟಿನ ನೋವಿನ ವಿಧಗಳು ಯಾವುವು:
1.ಪ್ರಾಥಮಿಕ ಡಿಸ್ಮೆನೊರಿಯಾ: ಪ್ರಾಥಮಿಕ ಡಿಸ್ಮೆನೊರಿಯಾ ಮಾಸಿಕ ಚಕ್ರದಲ್ಲಿ ಉಂಟಾಗುವ ಮುಟ್ಟಿನ ಸೆಳೆತ ಮತ್ತು ಹೊಟ್ಟೆ ನೋವನ್ನು ಸೂಚಿಸುತ್ತದೆ. ಮಹಿಳೆಯರು ತಮ್ಮ ಬೆನ್ನು, ತೊಡೆಗಳು ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಸೌಮ್ಯದಿಂದ ತೀವ್ರವಾದ ನೋವನ್ನು ಅನುಭವಿಸುತ್ತಾರೆ.
2.ಸೆಕೆಂಡರಿ ಡಿಸ್ಮೆನೊರಿಯಾ: ಮಹಿಳೆಯ ಸಂತಾನೋತ್ಪತ್ತಿ ಅಂಗಗಳಲ್ಲಿನ ಯಾವುದೇ ಅಸ್ವಸ್ಥತೆಯಿಂದಾಗಿ ಸಂಭವಿಸುವ ನೋವನ್ನು ಸೆಕೆಂಡರಿ ಡಿಸ್ಮೆನೊರಿಯಾ ಎಂದು ವರ್ಗೀಕರಿಸಲಾಗಿದೆ.
ಯೋಗ, ಈಜು, ವಾಕಿಂಗ್ ಅಥವಾ ಸೈಕ್ಲಿಂಗ್‌ನಂತಹ ಕೆಲವು ಸೌಮ್ಯವಾದ ವ್ಯಾಯಾಮವನ್ನು ಪ್ರಯತ್ನಿಸಿದರೆ ನೋವನ್ನು ತಡೆಯಬಹುದು. ಒಂದು ವೇಳೆ ನೋವನ್ನು ತಾಳಲಾರದೆ ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ಸೇವಿಸುವುದು ದೇಹಕ್ಕೆ ಅಡ್ಡ ಪರಿಣಾಮ ಬೀಳುವ ಸಾಧ್ಯತೆಯಿರುತ್ತದೆ. ಆದಷ್ಟು ಈ ಸಂದರ್ಭದಲ್ಲಿ ಮನೆಮದ್ದುಗಳನ್ನು ಮಾಡಿ ಮುಟ್ಟಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.