ಕರ್ನಾಟಕದಲ್ಲಿ 2 ಲಕ್ಷ ಜನಕ್ಕೆ ಕೊರೊನಾ? ಸಚಿವ ಹೇಳಿದ್ದೇನು?
ಶುಕ್ರವಾರ, 12 ಜೂನ್ 2020 (17:08 IST)
ಈಗ ಮಳೆಗಾಲ ಆರಂಭವಾಗಿದ್ದು, ಸಹಜವಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಲಿವೆ.
ಮಳೆಗಾಲದಲ್ಲಿ ಸಣ್ಣದಾಗಿ ಬರುವ ಜ್ವರವನ್ನು ನಿರ್ಲಕ್ಷ್ಯ ಮಾಡದೇ ತಪಾಸಣೆಗೆ ಒಳಗಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಈಗ ಕೊರೊನಾ ಸೋಂಕಿತರಲ್ಲಿ ಮೂವರು ಜನ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದು ಕೊನೆ ಕ್ಷಣದಲ್ಲಿ ಅವರು ಆಸ್ಪತ್ರೆಗೆ ಬಂದರು. ಅದಕ್ಕಾಗಿ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಜನರು ತಕ್ಷಣ ಜ್ವರ, ನೆಗಡಿ, ಕೆಮ್ಮು ಸಣ್ಣದಾಗಿ ಕಾಣಿಸಿಕೊಂಡರೂ ಅದರಲ್ಲೂ 60 ವರ್ಷ ಮೇಲ್ಪಟ್ಟವರು ತಕ್ಷಣ ಫೀವರ್ ಕ್ಲೀನಿಕ್ ಗಳಿಗೆ ಆಗಮಿಸಬೇಕು ಎಂದರು.
ಕೊರೊನಾ ಸೋಂಕಿತರಲ್ಲಿ ಶೇ. 97 ರಷ್ಟು ಜನರಲ್ಲಿ ಸೋಂಕು ಲಕ್ಷಣ ಇಲ್ಲ ಎಂದ ಅವರು, ನಾವು ಐಎಲ್ ಎ (ಇತರೆ ಕಾಯಿಲೆಗಳಿಂದ ಸೋಂಕಿಗೆ ಒಳಗಾದವರು) ಇರುವ ರೋಗಿಗಳನ್ನು ರಕ್ಷಿಸಿಕೊಳ್ಳಬೇಕಿದೆ ಎಂದಿದ್ದಾರೆ.
ತಜ್ಞರ ಒಂದು ಅಂದಾಜಿನ ಪ್ರಕಾರ ಬರುವ ಆಗಷ್ಟ್ ವೇಳೆಗೆ ನಮ್ಮ ರಾಜ್ಯದಲ್ಲಿಯೂ 2 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಅದಕ್ಕಾಗಿನಾವು ಈಗಿನಿಂದಲೇ ಅದಕ್ಕೆ ತಕ್ಕಂತೆ ಸಿದ್ಧತೆ, ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.