ಡಿಬಾಸ್ ಕೈದಿ ನಂ.6106ನ್ನು ವಾಹನಕ್ಕೆ ರಿಜಿಸ್ಟರ್ ಮಾಡಲು ಮುಂದಾದ ದರ್ಶನ್ ಅಭಿಮಾನಿ
ಬನ್ನೂರಿನ ಅಭಿಮಾನಿಯಾಗಿರುವ ಧನುಷ್ ಎಂಬತ ಇದೀಗ ತನ್ನ ವಾಹನಕ್ಕೆ ಈ ನಂಬರ್ ಅನ್ನು ರಿಜಿಸ್ಟರ್ ಮಾಡಲು ಮುಂದಾಗಿದ್ದಾನೆ. ಇನ್ನೂ ಧನುಷ್ ಅವರು ನಟ ದರ್ಶನ್ ಜೈಲು ಪಾಲಾಗಿರುವುದನ್ನು ನೆನೆಸಿಕೊಂಡು ಭಾವುಕರಾದರು. ಶೀಘ್ರ ಬಿಡುಗಡೆಯಾದರೆ 101 ತೆಂಗಿನಕಾಯಿ ಒಡೆಯುವುದಾಗಿ ನಾಡ ಅಧಿದೇವತೆ ಚಾಮುಂಡಿಯಲ್ಲಿ ಹರಕೆ ಹೊತ್ತಿದ್ದಾನೆ ಎಂದಿದ್ದಾನೆ.