ದೇಶದಲ್ಲಿ ಇಂದು ನವೆಂಬರ್ 18,ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸತತ ಹದಿಮೂರನೇ ದಿನವೂ ಇಂಧನ ದರ ಸ್ಥಿರವಾಗಿದೆ. ದೀಪಾವಳಿ ಹಬ್ಬದ ವೇಳೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಇತ್ತೀಚಿಗೆ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ್ದು, ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿದೆ.
ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಅನೇಕ ನಗರಗಳಲ್ಲಿ ಇಂಧನ ದರ ತಗ್ಗಿದೆ. ನವೆಂಬರ್ 4ನೇ ತಾರೀಕಿನಂದು ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಮನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಅನೇಕ ರಾಜ್ಯಗಳು ವ್ಯಾಟ್ ಅನ್ನು ಕಡಿಮೆ ಮಾಡಿತ್ತು.
ನವದೆಹಲಿಯಲ್ಲಿ
ನವೆಂಬರ್ 18 ದಂದು ಪೆಟ್ರೋಲ್- ಡೀಸೆಲ್ ಬೆಲೆ ಪರಿಷ್ಕರಿಸಿಲ್ಲ. ಇಂದು ಪೆಟ್ರೋಲ್ ದರ 103.97 ರು/ಲೀಟರ್ ಡೀಸೆಲ್ ದರವು 86.67 ರು/ಲೀಟರ್ ನಂತೆ ಇದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.
ನ. 14: 94.62 ರು
ನ. 13: 94.62 ರು
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ (ಸದ್ಯ 82.30 ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=74.36 ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.