ಮೋದಿ ಸ್ನೇಹಿತರಿಂದಲೇ ಭಾರತಕ್ಕೆ ತೊಂದರೆ ಎದುರಾಗಿರೋದು: ಮಲ್ಲಿಕಾರ್ಜುನ ಖರ್ಗೆ

Krishnaveni K

ಬುಧವಾರ, 24 ಸೆಪ್ಟಂಬರ್ 2025 (13:57 IST)
ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಇಂದು ಕಾಂಗ್ರೆಸ್ ಕಾರ್ಯಕಾರೀ ಸಮಿತಿ ಸಭೆಯಲ್ಲಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸ್ನೇಹಿತರಿಂದಲೇ ಭಾರತಕ್ಕೆ ಸಂಕಷ್ಟಗಳ ಸರಮಾಲೆ ಎದುರಾಗಿರೋದು ಎಂದಿದ್ದಾರೆ.

ಇಂದು ಬಿಹಾರದಲ್ಲಿ ಕಾಂಗ್ರೆಸ್ ಕಾರ್ಯಕಾರೀ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ದೇಶ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಮೋದಿ ನನ್ನ ಸ್ನೇಹಿತರು ಎಂದು ಹೆಮ್ಮೆಪಡುವ ವ್ಯಕ್ತಿಗಳಿಂದಲೇ ತೊಂದರೆ ಎದುರಾಗುತ್ತಿದೆ ಎಂದಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ಸ್ನೇಹದ ಬಗ್ಗೆ ಖರ್ಗೆ ಈ ರೀತಿ ವಾಗ್ದಾಳಿ ನಡೆಸಿದ್ದಾರೆ. ಭಾರತದ ಮೇಲೆ ಹೆಚ್ಚುವರಿ ಸುಂಕದ ಬಳಿಕ ಮೊನ್ನೆಯಷ್ಟೇ ಭಾರತೀಯ ಉದ್ಯೋಗಿಗಳನ್ನೇ ಗುರಿಯಾಗಿರಿಸಿಕೊಂಡು ಟ್ರಂಪ್ ಎಚ್1ಬಿ1 ವೀಸಾ ಶುಲ್ಕ ಭಾರೀ ಹೆಚ್ಚಳ ಮಾಡಿದ್ದರು. ಇದರಿಂದ ಭಾರತೀಯ ಉದ್ಯೋಗಿಗಳಿಗೆ ಸಮಸ್ಯೆಯಾಗಿದೆ.

ಇದೇ ಕಾರಣಕ್ಕೆ ಖರ್ಗೆ ಈ ರೀತಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರ ಚುನಾವಣೆ ಮೋದಿ ಸರ್ಕಾರದ ಭ್ರಷ್ಟ ಮತ್ತು ಅಸಮರ್ಥ ಆಡಳಿತದ ಅಂತ್ಯಕ್ಕೆ ನಾಂದಿ ಹಾಡಲಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ