ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವರ್ತೂರು ಪ್ರಕಾಶ್ಗೆ ಬಂಧನ ವಾರಂಟ್ ಜಾರಿಯಾಗಿದೆ. 14 ವರ್ಷಗಳ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾರಂಟ್ ಜಾರಿಗೊಳಿಸಿರುವ ಆನೇಕಲ್ JMFC ನ್ಯಾಯಾಲಯ, ವರ್ತೂರು ಅವರನ್ನು ಮೇ 10ರೊಳಗೆ ಬಂಧಿಸುವಂತೆ ಆದೇಶಿಸಿದೆ. 14 ವರ್ಷಗಳ ಹಿಂದೆ ವರ್ತೂರು ಪ್ರಕಾಶ್ , ಲೀಲಾವತಿ ಎಂಬುವವರಿಗೆ ಚೆಕ್ ನೀಡಿದ್ದ ಪ್ರಕರಣವಿದು. ಹಣದ ವ್ಯವಹಾರವೊಂದಕ್ಕೆ ಸಂಬಂಧಪಟ್ಟಂತೆ, 2008ರಲ್ಲಿ ಲೀಲಾವತಿ ಎಂಬುವರಿಗೆ 25 ಲಕ್ಷ ರೂ.ಗಳ ಚೆಕ್ ಅನ್ನು ವರ್ತೂರು ಪ್ರಕಾಶ್ ನೀಡಿದ್ದರು. ಲೀಲಾವತಿಯವರು ಚೆಕ್ ಮೂಲಕ ನಗದು ಡ್ರಾ ಮಾಡಲು ಹೋದಾಗ ಅದು ಬೌನ್ಸ್ ಆಗಿತ್ತು. ಆಗ ಅವರು, ಆನೇಕಲ್ JMFC ನ್ಯಾಯಾಲಯದಲ್ಲಿ ವರ್ತೂರು ವಿರುದ್ಧ ಪ್ರಕರಣ ದಾಖಲಿಸಿದ್ದರು.