ವಿಶ್ವವಿದ್ಯಾಲಯ ರಸ್ತೆ ಯಲ್ಲಿ ವಿದ್ಯಾರ್ಥಿಗಳ ಜೀವಕ್ಕಿಲ್ಲ ಬೆಲೆ

ಶನಿವಾರ, 25 ಜೂನ್ 2022 (20:45 IST)
ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಒಂದು.ಮೋದಿ ಬರ್ತಾರೆ ಅನ್ನುವ ಒಂದೇ ಕಾರಣಕ್ಕೆ 21 ಕೋಟಿ ಖರ್ಚು ಮಾಡಿ ವಿಶ್ವವಿದ್ಯಾಲಯ ಸುತ್ತ ಮುತ್ತ ಡಾಂಬರೀಕರಣ ರಾತ್ರೋರಾತ್ರಿ ಮಾಡಿದ್ರು, ಅಷ್ಟೇ ಅಲ್ಲ ಮೋದಿ ಹೋಗಲು ರಸ್ತೆ ಸಲಿಸಾಗಲಿ ಎಂದು ಇರುವ ಹಂಪ್ಸ್ ನೆಲ್ಲ  ತೆಗೆದು  ವಿದ್ಯಾರ್ಥಿಗಳ ಜೀವಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ.ರಾಜಧಾನಿಗೆ ಮೋದಿ ಬರ್ತಾರೆಂದು ಕೇವಲ 4 ಗಂಟೆಗೆ ಸುಮಾರು 21 ಕೋಟಿ ಖರ್ಚು ಮಾಡಿ ರಸ್ತೆಯನ್ನೆಲ್ಲ ಲಕಲಕ ಅಂತಾ ಹೊಳೆಯುವಂತೆ ಮಾಡಿದ್ದಾರೆ. ಆದ್ರೆ ಮೋದಿಯ ಪ್ರತಿಷ್ಟೆಗೆ ಇಷ್ಟೇಲ್ಲ ಖರ್ಚು ಮಾಡಿದವರಿಗೆ ವಿದ್ಯಾರ್ಥಿಗಳ ಜೀವದ ಬಗ್ಗೆ ಕಾಳಜಿ ಇಲ್ಲದಂತಾಗಿದೆ.ವಿಶ್ವವಿದ್ಯಾಲಯದಲ್ಲಿದ್ದ 22  ಹಂಸ್ ನ್ನ ರಾತ್ರೋರಾತ್ರಿ ತೆಗೆದು ಪ್ರಧಾನಿಗಳು ಹೋಗಲಿ ಎಂದು ಬಿಬಿಎಂಪಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಹೋಗಲಿ ಎಂದು 0 ಟ್ರಾಫಿಕ್ ಮಾಡಿದ್ದಾರೆ.ಅಷ್ಟೇ ಅಲ್ಲ ಮೋದಿ ಲ್ಯಾಂಡ್ ಆಗ್ತಾರೆಂದು ಇದ್ದಾಂತಹ 3 ಎಲೆಪ್ಯಾಡ್ ಗಳನ್ನ ಟಾರ್ ಹಾಕಿ ಬೆಂಗಳೂರು ಅಂದ್ರೆ ವಾರ್ ವ್ಹಾ ಅನ್ನುವಾಗೆ ಮಾಡಿದ್ದಾರೆ .

ಕೋಟಿ ಖರ್ಚು ಮಾಡಿ ಕಳಪೆ ರಸ್ತೆಯನ್ನ ಒಂದು ಕಡೆ ಮಾಡಿದ್ರೆ, ಮತ್ತೊಂದು ಕಡೆ ಜ್ಞಾನಭಾರತಿ ರಸ್ತೆಯಲ್ಲಿ ನಿತ್ಯ ಅಪಘಾತ ಹೆಚ್ಚಾಳವಾಗ್ತಿದೆ. ನಿತ್ಯ ಏನಿಲ್ಲ ಅಂದ್ರು 5 ರಿಂದ 6 ಜನರು ಅಪಘಾತಕ್ಕೆ ಹಿಡಾಗ್ತಿದ್ದಾರೆ. ರಸ್ತೆಯ ಅವ್ಯವಸ್ಥೆಯನ್ನ ಕಂಡು ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ .ರಸ್ತೆಯಲ್ಲಿ ತೆಗೆದ 22 ಹಂಪ್ಸ್ ನ್ನ ಮತ್ತೆ ನಿರ್ಮಾಣ ಮಾಡಿಕೊಡಬೇಕೆಂದು ವಿವಿಯ ಆಡಳಿತ ಮಂಡಳಿ ಬಿಬಿಎಂಪಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.ಇನ್ನು
 ಇದರ ಜೊತೆಗೆ ವಿವಿಯ ವಿದ್ಯಾರ್ಥಿಗಳು ಕೂಡ ರಾಜಕಾರಣಿಗಳಿಗೆ ಒಂದು ನ್ಯಾಯ? ಸಾಮಾನ್ಯ ಜನರಿಗೆ ಒಂದು ನ್ಯಾಯನಾ?  ಎಂದು ಪ್ರಶ್ನೆ ಮಾಡಿದ್ದಾರೆ. ಚನ್ನಾಗಿರುವ ರಸ್ತೆಯನ್ನ ಅಧ್ವಾನಮಾಡಿದ್ದಾರೆಂದು ವಿದ್ಯಾರ್ಥಿಗಳು ಅಸಾಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಿಶ್ವ ವಿದ್ಯಾಲಯದಲ್ಲಿ ಮೋದಿಗಾಗಿ ಕೋಟಿ ಕೋಟಿ ಖರ್ಚು ಮಾಡಿ ಉತ್ತಮಾವಾಗಿದ್ದ ರಸ್ತೆಯನ್ನ ಹಾಳುಮಾಡಿಟ್ಟಿದ್ದಾರೆಂದು ವಿದ್ಯಾರ್ಥಿಗಳು ಆಕ್ರೋಶಭರಿತಾರಾಗಿದ್ದಾರೆ.ನಿತ್ಯ ರಸ್ತೆಯನ್ನ ದಾಟುವಾಗ ತುಂಬ ಕಷ್ಟಪಟ್ಟು ಜೀವವನ್ನ ಕೈಯಲ್ಲಿಡಿದು ರಸ್ತೆಯನ್ನ ದಾಟುವಂತಾಗಿದೆ. ಮತ್ತೆ ವಿಶ್ವವಿದ್ಯಾಲಯದಲ್ಲಿ ಯಾವ ರೀತಿ ರಸ್ತೆ ಇತ್ತು. ಆ ರೀತಿ ರಸ್ತೆಯನ್ನ ಮಾಡಿಕೊಂಡಬೇಕೆಂದು ಆಗ್ರಹಿಸಿದ್ದಾರೆ. ಒಂದೇ ದಿನಕ್ಕೆ ಯೂನಿವರ್ಸಿಟಿಯಲ್ಲಿ ವಾಸಮಾಡುವ , ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಸಂಕಷ್ಟ ತಂದಿಟ್ಟಿದ್ದಾರೆ.ಬಿಬಿಎಂಪಿ ಜನರ ತೆರಿಗೆ ಹಣವನ್ನ ಪೋಲು ಮಾಡಿ ಉತ್ತಮವಾದ ರಸ್ತೆಯನ್ನ ಕೂಡ ಅಧ್ವಾನ ಮಾಡಿಟ್ಟಿದ್ದಾರೆ. ಕೋಟ್ಯಾತರ ರೂಪಾಯಿಯನ್ನ ಕೇವಲ 4  ಗಂಟೆಯಲ್ಲಿ ವ್ಯರ್ಥಮಾಡಿ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಇನ್ನು ಬಿಬಿಎಂಪಿ ಗೆ ವಿವಿಯ ಆಡಳಿತ ಮಂಡಳಿ ಮೊದಲಿನಂತೆ ರಸ್ತೆಯ ಹಂಪ್ಸ್ ಮಾಡುವಂತೆ ಆಗ್ರಹಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ