ನರ್ಸ್ ನಿಮಿಷಾ ಪ್ರಿಯಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮರಣದಂಡನೆ ಶಿಕ್ಷೆ ಇನ್ನೂ ರದ್ದಾಗಿಲ್ಲ ಎಂದ ಎಂಇಎ

Sampriya

ಭಾನುವಾರ, 3 ಆಗಸ್ಟ್ 2025 (10:19 IST)
ನವದೆಹಲಿ: ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣಕ್ಕೆ ಮಹತ್ವದ ತಿರುವು ದೊರಕಿದೆ. ಈ ಕುರಿತು  ಕೇಂದ್ರ ವಿದೇಶಾಂಗ ಸಚಿವಾಲಯ (ಎಂಇಎ) ಮಹತ್ವದ ಹೇಳಿಕೆಯನ್ನು ಬಿಡುಗಡೆ ಮಾಡಿದೆ.  

ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಕೇಂದ್ರ ಸರ್ಕಾರವು ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದೆ. ನಿಮಿಷಾ ಅವರಿಗೆ ವಿಧಿಸಿದ್ದ ಯಮೆನ್ ಗಲ್ಲು ಶಿಕ್ಷೆಯನ್ನು ಮುಂದೂಡಿದೆ, ಆದರೆ ರದ್ದುಪಡಿಸಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. 

ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ಮಾತುಕತೆ ನಡೆಸಲು ಐದು ಸದಸ್ಯರ ನಿಯೋಗವನ್ನು ಯೆಮೆನ್‌ಗೆ ಕಳುಹಿಸುವಂತೆ ಸೇವ್ ನಿಮಿಷಾ ಪ್ರಿಯಾ ಅಂತರರಾಷ್ಟ್ರೀಯ ಕ್ರಿಯಾ ಮಂಡಳಿಯ ವಿನಂತಿಯನ್ನು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ.


ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಪ್ರಾತಿನಿಧ್ಯ ನೀಡಲು ಮಂಡಳಿಗೆ ಅವಕಾಶ ನೀಡಿದ್ದರೂ ಸಚಿವಾಲಯ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ನಿಮಿಷಾ ಪ್ರಿಯಾ ಅವರಿಗೆ ಯುದ್ಧಪೀಡಿತ ಯೆಮೆನ್ ದೇಶದಲ್ಲಿ ಮರಣದಂಡನೆ ಶಿಕ್ಷೆ ಪ್ರಕಟವಾಗಿದೆ. ಆ ಶಿಕ್ಷೆ ರದ್ದಾಗಿತ್ತು ಎಂದು ಕೆಲ ದಿನಗಳ ಹಿಂದೆ ತಿಳಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ