ಬೆಂಗಳೂರಿನ ಕೇಂದ್ರ ವಿಭಾಗದ ಹೈಗ್ರೌಂಡ್ಸ್ ಮತ್ತು ಆಶೋಕನಗರ ಪೊಲೀಸ್ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಂಥದ್ದೊದು ಖರ್ತಾನಾಕ್ ಕಳ್ಳರ ಗ್ಯಾಂಗ್ ನ ಖೆಡ್ಡಗೆ ಬೀಳಿಸಿದ್ದಾರೆ.. ಆಂಧ್ರಪ್ರದೇಶ ಮೂಲದ ಸುನೀತಾ, ಮಟ್ಟಪತಿರಾಣಿ, ರತನಾಲು, ಶಿವಕುಮಾರ್, ಶಿವರಾಮ್ ಪ್ರಸಾದ್, ಭರತ್ ಕಳವು ಮಾಡೋಕೆ ಅಂತಾನೇ ಬೆಂಗಳೂರಿಗೆ ಬರ್ತಿದ್ರು.. ಹಾಗೇ ಬರ್ತಿದ್ದ ಈ ಟೀಂ ಬರುವಾಗಲೇ ಹೈ ಪೈ ಆಗಿ ಡ್ರೆಸ್ ಮಾಡ್ಕೊಂಡು, ನಗರದಲ್ಲಿರುವ ಪ್ರತಿಷ್ಠಿತ ಸೀರೆ ಅಂಗಡಿಗಳನ್ನು ಟಾರ್ಗೇಟ್ ಮಾಡ್ತಿದ್ರು.. ಜನ ಜಾಸ್ತಿ ಇರೊ ಟೈಂ ನೋಡಿ ಸೀರೆ ಅಂಗಡಿಗಳಿಗೆ ಎಂಟ್ರಿಯಾಗ್ತಿದ್ದ ಈ ಗ್ಯಾಂಗ್, ನಮ್ದು ಮದುವೆ ಇದೆ ಬಟ್ಟೆ ಗ್ರಾö್ಯಂಡ್ ಆಗಿ ಇರಬೇಕು ರೇಟು ಎಷ್ಟಾದ್ರು ಪರವಾಗಿಲ್ಲ ತೋರಿಸಿ ಅಂತಿದ್ರು
ಅಂಗಡಿ ಸಿಬ್ಬಂದಿ ಸೀರೆಗಳನ್ನು ತೋರಿಸೋಕೆ ಮುಂದಾದ ವೇಳೆ, ಇನ್ನು ಚನ್ನಾಗಿರೋದು ತೊರಿಸಿ, ಒಂದು ಲಕ್ಷ ಮೇಲ್ಪಟ್ಟು ಸೀರೆಗಳಿಲ್ವ ಇದ್ರೆ ಅವನ್ನು ತೋರಿಸಿ ಅಂತಿದ್ರು.. ಸುಮಾರು ಇಪ್ಪತ್ತಕ್ಕೂ ಅಧಿಕ ಕಾಸ್ಲ್ಟಿ ಸೀರೆಗಳನ್ನು ಒಟ್ಟಿಗೆ ನೋಡೋ ನೆಪದಲ್ಲಿ ಎಲ್ಲರು ಒಟ್ಟಿಗೆ ಸೇರಕೊಂಡು ಕ್ಯಾಮರಾ ಮತ್ತು ಇತರೆ ಸಿಬ್ಬಂದಿಗೆ ಕಾಣದಂತೆ ಅಡ್ಡ ನಿಂತ್ಕೋತಿದ್ರು.. ಕೆಲವೇ ಕ್ಷಣದಲ್ಲಿ ಒಂದೋ ಎರಡೋ ಸೀರೆಗಳನ್ನು ಕದ್ದು, ಇನ್ನು ಚನ್ನಾಗಿರೋದು ಬೇಕು ಮತ್ತೆ ಬರ್ತಿವಿ ಅಂತಾ ಎಸ್ಕೇಪ್ ಆಗಿಬಿಡ್ತಿದ್ರು.. ಈ ಗ್ಯಾಂಗ್ ಹೊರಗೆ ಹೋದ ಮೇಲೆ ಸೀರೆ ಲೆಕ್ಕ ಮಾಡುತ್ತಿದ್ದ ಸಿಬ್ಬಂದಿ ಸೀರೆಗಳು ಕಾಣದೇ ಇದ್ದಾಗ ಸಿಸಿಟಿವಿ ಪರಿಶೀಲನೆ ನಡೆಸಿದ್ರು.. ಈ ವೇಳೆ ಈ ಗ್ಯಾಂಗ್ ನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.. ಈ ಸಂಬAಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಆರು ಜನರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ