ಹಲ್ಲೆ ಆರೋಪ: ಚೈತ್ರಾ ಕುಂದಾಪುರ ಗ್ಯಾಂಗ್ನ ಪ್ರಮುಖನ ಮೇಲೆ ಮತ್ತೊಂದು ದೂರು
ಸಲೂನ್ ಮಾಲೀಕ ರಾಮು ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಕಳೆದ ತಿಂಗಳು ಜೈಲಿನಿಂದ ಹೊರಬಂದಿರುವ ಧನರಾಜ್ ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು.
ಸೋಮವಾರ ಕಡೂರಿನ ಹೋಟೆಲ್ ನಲ್ಲಿ ಹಲ್ಲೆ ನಡೆಸಿದ್ದು, ಹಲ್ಲೆ ಸಂಬಂಧ ಬೀರೂರು ಪೊಲೀಸರಿಗೆ ರಾಮು ದೂರು ನೀಡಿದ್ದಾರೆ. ಆದರೆ ಬೀರೂರು ಪೊಲೀಸರು ಪ್ರಕರಣ ದಾಖಲಿಸದ ಹಿನ್ನೆಲೆ ಚಿಕ್ಕಮಗಳೂರು ಎಸ್ಪಿಗೆ ಸಲೂನ್ ಮಾಲೀಕ ರಾಮು ದೂರು ನೀಡಿದ್ದಾರೆ.