ಕೆಎಸ್‌ಆರ್‌ಟಿಸಿನಲ್ಲಿ ಅಜ್ಜಿ ಮೊಮ್ಮಗಳಿಗೆ ಫ್ರೀ ಟಿಕೆಟ್: ಅವರಲ್ಲಿದ್ದ ಲವ್‌ ಬರ್ಡ್ಸ್‌ಗಳ ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಾ

Sampriya

ಬುಧವಾರ, 27 ಮಾರ್ಚ್ 2024 (19:03 IST)
Photo Courtesy
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಜಾರಿ ಮಾಡಿದ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ.  ಉಚಿತ ಬಸ್ ಪ್ರಯಾಣವೆಂದು ಮಹಿಳೆಯರು ಕೈಗೊಳ್ಳುವ ಪ್ರವಾಸ, ಸೀಟಿಗಾಗಿ ಪರದಾಟ ಹೀಗೇ ನಾನಾ ರೀತಿಯಾ ಸುದ್ದಿ ಚಾಲ್ತಿಯಲ್ಲಿರುತ್ತದೆ. ಆದರೆ ಈ ಬಾರಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅಜ್ಜಿ ಮೊಮ್ಮಗಳ ಜತೆ ಪ್ರಯಾಣಿಸಿದ ಲವ್‌ ಬರ್ಡ್ಸ್‌ಗಳ ಟಿಕೆಟ್ ದರ ಸುದ್ದಿಯಲ್ಲಿದೆ.

ಅಜ್ಜಿ ಮೊಮ್ಮಗಳು ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಅದೇ ಅವರ ಬಳಿ ಇದ್ದ ಲವ್‌ ಬರ್ಡ್ಸ್‌ ಪ್ರಯಾಣಕ್ಕೆ ₹444 ಹಣವನ್ನು ಪಾವತಿಸಿದ್ದಾರೆ.

‌ಇಂದು ಬೆಳಿಗ್ಗೆ 08-18 ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಹೊರಟ್ಟಿದ್ದ ಅಜ್ಜಿ ಮೊಮ್ಮಗಳು, ತಮ್ಮ ಜತೆಗಿದ್ದ  ನಾಲ್ಕು ಲವ್ ಬರ್ಡ್ಸ್ ಗಳನ್ನು ಕೊಂಡೊಯ್ದಿದ್ದರು. ಆ ಲವ್ ಬರ್ಡ್ಸ್ ಗಳಿದ್ದ ಪಿಂಜರವನ್ನು ಅಜ್ಜಿ-ಮೊಮ್ಮಗಳಿಬ್ವರು ತಮ್ಮ ನಡುವೆಯೇ ಒಂದು ಆಸನದಲ್ಲಿ ಇರಿಸಿದ್ದರು.

ಇದನ್ನು ಗಮನಿಸಿದ ಕೆ‌ಎಸ್‌ಆರ್‌ಟಿ‌ಸಿ ಕಂಡಕ್ಟರ್ ಶಕ್ತಿ ಯೋಜನೆಯಡಿ ಅಜ್ಜಿಗೆ ಫ್ರೀ ಟಿಕೆಟ್, ಮೊಮ್ಮಗಳಿಗೆ ಫ್ರೀ ಟಿಕೆಟ್ ನೀಡಿದ್ದಾರೆ. ಆದರೆ, ನಾಲ್ಕು ಲವ್ ಬರ್ಡ್ಸ್ ಗಳಿಗೆ ತಲಾ ₹111ಗಳಂತೆ ಪರಿಗಣಿಸಿ ₹444  ಟಿಕೆಟ್ ನೀಡಿದ್ದಾರೆ. ನಾಲ್ಕು ಲವ್ ಬರ್ಡ್ಸ್ ಗಳಿಗೆ ಟಿಕೆಟ್ ನೀಡುವಾಗ ನಾಲ್ಕು ಮಕ್ಕಳು ಎಂದು ಟಿಕೆಟ್ ನಲ್ಲಿ ನಮೂದಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ