ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಪೊಲೀಸರು ಜಪ್ತಿ ಮಾಡಿದ್ದ ಬೈಕ್ ಬಿಡುಗಡೆಗೆ ಕೋರಿದ್ದರು. ಈ ವೇಳೆ ಬೈಕ್ ಮೇಲುಸ್ತುವಾರಿವಹಿಸಿದ್ದ ಹೆಡ್ ಕಾನ್ಸ್ಟೇಬಲ್ ಮಂಜಣ್ಣ, ವಾಹನದ ಬಿಡುಗಡೆಗೆ 20 ಸಾವಿರ ರೂ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಬೈಕ್ ಮಾಲೀಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.ಎಸಿಬಿ ಪೊಲೀಸರು 2017ರ ಜುಲೈ 15ರಂದು ಕಾರ್ಯಾಚರಣೆ ನಡೆಸಿ ಮಂಜಣ್ಣ ಲಂಚ ಪಡೆಯುವ ವೇಳೆಯೇ ಬಂಧಿಸಿ, 2018ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನಗರದ ವಿಶೇಷ ನ್ಯಾಯಾಲಯ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ 4 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.