ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇಂದು 108 ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎರಡು ತಿಂಗಳಿಂದ ವೇತನ ನೀಡದಿದ್ದಕ್ಕೆ ಆಕ್ರೋಶಗೊಂಡಿರುವ ಆರೋಗ್ಯ ಕವಚ ನೌಕರರು, ಇಂದು ಕರ್ತವ್ಯಕ್ಕೆ ಗೈರಾಗಲು ನಿರ್ಧರಿಸಿರುವುದರಿಂದ 108 ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಇತ್ತೀಚೆಗೆ 108 ಆಂಬ್ಯುಲೆನ್ಸ್ ಸರ್ವಿಸ್ ಘಟಕದಲ್ಲಿ ಹಾರ್ಡ್ ಡಿಸ್ಕ್ ವೈಫಲ್ಯದಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೋಗಿಗಳಿಗೆ ತೊಂದರೆ ಉಂಟಾಗಿತ್ತು. ಆದರೆ ಈಗ ಮತ್ತೆ 108 ಆಂಬ್ಯುಲೆನ್ಸ್ ಸಿಬ್ಬಂದಿ ಕಳೆದ ಎರಡು ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದು ರಾಜ್ಯ ವ್ಯಾಪ್ತಿ 108 ವಾಹನ ಸ್ಥಗಿತಗೊಳಿಸಲು ಮುಂದಾಗಿದ್ದಾರೆ. ಇಂದು ಸಂಬಳ ಆಗಿಲ್ಲ ಎಂದರೆ ಕರ್ತವ್ಯಕ್ಕೆ ಬಾರದಿರಲು ಸಿಬ್ಬಂದಿ ನಿರ್ಧರಿಸಿದ್ದು, ಇದರಿಂದ ಇಂದು ರಾಜ್ಯಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿಯ ಭೀತಿ ಕಾಡುತ್ತಿದೆ.