ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿಯಾದ ರೂಪಶ್ರೀ ಎಂಬುವರಿಗೆ, ಅದೇ ಠಾಣೆಯ ಪೊಲೀಸ್ ನಿರೀಕ್ಷಕ ಆನಂದ್ ಮತ್ತು ಠಾಣೆಯ ಇತರ ಅಧಿಕಾರಿ, ಸಿಬ್ಬಂದಿ ಸಾಂಪ್ರದಾಯಿಕವಾಗಿ ಬುಧವಾರ ಸೀಮಂತ ಕಾರ್ಯ ಮಾಡಿದರು.
ಕಾನ್ಸ್ಟೇಬಲ್ಗೆ ಸೀಮಂತ
ಸಿಹಿ ತಿಂಡಿಗಳು ಸೇರಿದಂತೆ ವಿವಿಧ ಉಡುಗೊರೆ ಕೊಟ್ಟು ಸಹೋದ್ಯೋಗಿಗೆ ಶುಭ ಹಾರೈಸಿ, ಉಡಿ ತುಂಬಿ ಕಳುಹಿಸಿಕೊಡಲಾಗಿದೆ. ಸದಾ ಜಂಜಾಟ, ಬಂದೋಬಸ್ತ್, ಓಡಾಟದಲ್ಲೇ ಮುಳುಗಿರುವ ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.