ಕೊಡಗು ನಿರಾಶ್ರಿತರಿಗೆ ಮುಜರಾಯಿ ಇಲಾಖೆಯಿಂದ 12 ಕೋಟಿ ನೆರವು

ಶುಕ್ರವಾರ, 24 ಆಗಸ್ಟ್ 2018 (16:07 IST)
ಕೊಡಗು ನಿರಾಶ್ರಿತರಿಗೆ ಮುಜರಾಯಿ ಇಲಾಖೆಯಿಂದ 12 ಕೋಟಿ 31 ಲಕ್ಷ ರೂ.ಗಳ ಸಹಾಯ ಹಸ್ತ ಚಾಚಲಿರುವುದಾಗಿ ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲ, ಸರಕಾರ ಗಟ್ಟಿಯಾಗಿದೆ. ಯಾರ ಮಾತಿಗೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಭಾರೀ ಮಳೆಯಿಂದ ಕಷ್ಟನಷ್ಟ ಸಂಭವಿಸಿರುವ ಕೊಡಗು ಜಿಲ್ಲೆಯ ಜನರ ಸಹಾಯಕ್ಕೆ ಸರಕಾರದ ವಿವಿಧ ಇಲಾಖೆಗಳು ಮುಂದಾಗುತ್ತಿವೆ. ಏತನ್ಮಧ್ಯೆ ಮುಜರಾಯಿ ಇಲಾಖೆಯಿಂದ 12 ಕೋಟಿ 31 ಲಕ್ಷ ರೂ. ಪರಿಹಾರ ಬಿಡುಗಡೆಗೊಳಿಸಲಿರುವುದಾಗಿ ಸಚಿವ ರಾಜಶೇಖರ ಪಾಟೀಲ ಹೇಳಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತರಿಗಾಗಿ ದೇವಾಲಯಗಳಿಂದ ಶೀಘ್ರದಲ್ಲೇ ಚೆಕ್ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ. ಇನ್ನು ಹೊಸ ಸರ್ಕಾರ ರಚನೆ ಆಗಿ ಇನ್ನೂ ಎರಡು ತಿಂಗಳೂ ಆಗಿಲ್ಲ. ಅಭಿವೃದ್ಧಿಗೆ ಸಮಯ ಬೇಕು ಎಂದ ಅವರು, ಶ್ರಾವಣ ಮಾಸ ಮುಗಿದ್ರೊಳಗೆ ಸರ್ಕಾರ ಬೀಳುತ್ತದೆ ಎಂಬ ಬಸನಗೌಡ ಪಾಟೀಲ ಅವರ ಮಾತಿಗೆ ಟಾಂಗ್ ನೀಡಿದರು.
ನಮ್ಮ ಸರ್ಕಾರ ಗಟ್ಟಿ ಇದೆ ಯಾರ ಮಾತಿಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.   





ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ