ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ 14 ವಿದ್ಯಾರ್ಥಿನಿಯರು! ಕಾರಣವಾದ್ರು ಏನು?

ಭಾನುವಾರ, 17 ಸೆಪ್ಟಂಬರ್ 2023 (14:52 IST)
ಕಾರವಾರ : 14 ವಿಧ್ಯಾರ್ಥಿನಿಯರು ಸಾಮೂಹಿಕವಾಗಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಜನತಾ ಶಾಲೆಯಲ್ಲಿ ನಡೆದಿದೆ.

9 ಮತ್ತು 10 ನೇ ತರಗತಿಯ ಒಟ್ಟು 14 ವಿಧ್ಯಾರ್ಥಿನಿಯರು ಎಡಗೈ ತೋಳಿನ ಕೆಳಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಇರಲ್ಲಿ ಕೆಲವು ವಿದ್ಯಾರ್ಥಿನಿಯರು ಕೈ ಮೇಲೆ ಸ್ಟೆಪ್ಲರ್ ಪಿನ್ ನಿಂದ ಗೀರಿಕೊಂಡು ಕೈ ನರ ಕತ್ತರಿಸಿಕೊಳ್ಳಲು ಯತ್ನ ನಡೆಸಿದ್ದಾರೆ.

ಶಾಲೆಯಲ್ಲಿ ತಪಾಸಣೆ ವೇಳೆ ಘಟನೆ ಬೆಳಕಿಗೆ ಬಂದಿದ್ದು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದರೋ ಅಥವಾ ಶಾಲೆಯಲ್ಲಿ ಯತ್ನಿಸಿದರೋ ಮಾಹಿತಿ ಹೊರಬರಬೇಕಿದೆ.

ಆತ್ಮಹತ್ಯೆ ಯತ್ನಕ್ಕೆ ಕಾರಣ ನಿಗೂಢವಾಗಿದೆ. ಕೆಲವು ವಿದ್ಯಾರ್ಥಿನಿಯರು ಗೇಮ್ ಆಟದ ಟಾಸ್ಕ್ ಎಂದರೆ ಇನ್ನೂ ಕೆಲವರು ಬೇರೆಯೇ ಸಬೂಬು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಪೊಲೀಸರೊಂದಿಗೆ ಪೋಷಕರ ಸಭೆ ನಡೆಸಿ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸುತ್ತಿದ್ದು ತನಿಖೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ