ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಹೆಚ್ಚಾಗಿದೆ.. ವಿಜಯಪುರದಲ್ಲಿ 14 ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ ಹಾಕಲಾಗಿದ್ದು, ಮಹಾ ಗಡಿಭಾಗಕ್ಕೆ ಹೊಂದಿಕೊಂಡ ಶಾಲೆಗಳಿಗೆ ಕುತ್ತು ಬಂದಿದೆ.. ಶೂನ್ಯ ದಾಖಲಾತಿ, ಹಾಜರಾತಿ ಕೊರತೆ ಹಿನ್ನೆಲೆ ಶಾಲೆಗಳನ್ನು ಬಂದ್ ಮಾಡಲಾಗಿದೆ.. ಕಟ್ಟಡ ಕೊರತೆಯಿಂದಲೂ ಶಾಲೆ ಮುಚ್ಚಿ, ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.. 3 ವರ್ಷಗಳಿಂದ ಶಿಕ್ಷಣ ಇಲಾಖೆ ಶಾಲೆ ಮುಚ್ಚುತ್ತಿದೆ.. ಬಂದ್ ಆದ ಶಾಲೆ ಮಕ್ಕಳು, ಶಿಕ್ಷಕರು ಪಕ್ಕದ ಶಾಲೆಗೆ ಸೇರ್ಪಡೆಯಾಗಿದ್ದಾರೆ.. ಆದರೆ ಗ್ರಾಮೀಣ ಭಾಗದಲ್ಲಿರೋ ಬಡ ಮಕ್ಕಳ ಶಿಕ್ಷಣದ ಕಥೆ ಏನು ಎಂಬುದು ಸದ್ಯದ ಪ್ರಶ್ನೆಯಾಗಿದೆ.