ತಿಂಗಳಿಗೆ 140.34 ಕೋಟಿ ರೂಪಾಯಿ ಆದಾಯ ಗಳಿಸಿದ ತಿರುಪತಿ ತಿಮ್ಮಪ್ಪನ ದೇವಾಲಯ ...

ಸೋಮವಾರ, 12 ಸೆಪ್ಟಂಬರ್ 2022 (14:04 IST)
ವಿಶ್ವದ ಅತಿ ಸಿರಿವಂತ ದೇವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಿರುಪತಿ ತಿಮ್ಮಪ್ಪನಿಗೆ ಶ್ರಾವಣ ಮಾಸದಲ್ಲಿ ಭಾರಿ ದೇಣಿಗೆ ಹರಿದು ಬಂದಿದೆ. ಆಗಸ್ಟ್ ತಿಂಗಳು ಒಂದರಲ್ಲೇ ಬರೋಬ್ಬರಿ 140.34 ಕೋಟಿ ರೂಪಾಯಿ ಆದಾಯ ಬಂದಿದ್ದು, ಇದು ದೇಗುಲದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.
ಕೊರೊನಾ ಸಂದರ್ಭದಲ್ಲಿ ನಿರ್ಬಂಧಗಳಿದ್ದ ಕಾರಣ ತಿಮ್ಮಪ್ಪನ ದರ್ಶನಕ್ಕೆ ಅಷ್ಟಾಗಿ ಜನ ಸಮೂಹ ಬಂದಿರಲಿಲ್ಲ. ಆದರೆ ಇದೀಗ ದರ್ಶನಕ್ಕೆ ಯಾವುದೇ ಅಡೆತಡೆ ಇಲ್ಲದ ಕಾರಣ ದಾಖಲೆಯ ಸಂಖ್ಯೆಯಲ್ಲಿ ಜನಸಾಗರ ಹರಿದು ಬರುತ್ತಿದೆ.
 
ಆಗಸ್ಟ್ ತಿಂಗಳಿನಲ್ಲಿ ಬರೋಬ್ಬರಿ 22.22 ಲಕ್ಷ ಭಕ್ತರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ ಎಂದು ಹೇಳಲಾಗಿದ್ದು, ಈ ಪೈಕಿ 10.85 ಲಕ್ಷ ಭಕ್ತರು ತಲೆಮುಡಿ ಕೊಟ್ಟಿದ್ದಾರೆ. ಅಲ್ಲದೆ 1.5 ಕೋಟಿ ರೂಪಾಯಿ ಮೊತ್ತದ ಲಾಡು ಪ್ರಸಾದ ವಿತರಿಸಲಾಗಿದೆ. ಈ ತಿಂಗಳಿನಲ್ಲಿ 140.34 ಕೋಟಿ ರೂಪಾಯಿ ಆದಾಯ ದೇಗುಲಕ್ಕೆ ಬಂದಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ