ಆನೆಯಿಂದ ಮೃತಪಟ್ಟ ವ್ಯಕ್ತಿಗೆ 15 ಲಕ್ಷ ಪರಿಹಾರ-ವಿಜಯೇಂದ್ರ

geetha

ಮಂಗಳವಾರ, 20 ಫೆಬ್ರವರಿ 2024 (14:04 IST)
ಬೆಂಗಳೂರು : ಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ಇಂದು ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮಾಧ್ಯಮ ‌ಪ್ರತಿನಿಧಿಗಳೊಂದಿಗೆ  ಮಾತನಾಡಿದರು.ಇತ್ತೀಚೆಗೆ ಕೇರಳ ರಾಜ್ಯದ ವಯನಾಡಿನಲ್ಲಿ ಆನೆಯಿಂದ ಮೃತಪಟ್ಟ ವ್ಯಕ್ತಿಗೆ. ಕರ್ನಾಟಕ ಸರ್ಕಾರ 15 ಲಕ್ಷ ಪರಿಹಾರ ಘೋಷಣೆ‌ ಮಾಡಿದೆ. ಕೇರಳದ ವ್ಯಕ್ತಿಗೆ ಪರಿಹಾರ ನಿಡೀರೋದು ಕಾಂಗ್ರೆಸ್ ಪಕ್ಷದ ಮುಖಂಡ ಕೇರಳ ರಾಜ್ಯದ ಸಂಸದ ರಾಹುಲ್‌ಗಾಂಧಿ ಆದೇಶದ ಮೇರೆಗೆ 15 ಲಕ್ಷ ಕೊಟ್ಟಿದ್ದಾರೆ. ಬಿಜೆಪಿ ಇದನ್ನ ಖಂಡಿಸುತ್ತೆ.
 
ಬರದ ಸಂಧರ್ಭದಲ್ಲಿ ರೈತರಿಗೆ ಹೆಕ್ಟೇರ್ ಗೆ ಎರಡು ಸಾವಿರ ಮಾತ್ರ ಕೊಡ್ತಿದ್ದಾರೆ. ರಾಹುಲ್ ಗಾಂಧಿ ಹೇಳಿದ್ರು ಅಂತ 15 ಲಕ್ಷ ಕೊಟ್ಟಿದ್ದಾರೆ. ನಿಮ್ಮ ನಾಯಕರ ಖುಷಿ ಪಡಿಸಲು ಈ ನಿರ್ಧಾರ ಮಾಡಿದ್ದಾರೆ. ಒಂದು ಕಡೆ ಸಚಿವ ಈಶ್ವರ್ ಖಂಡ್ರೆ ಹೇಳ್ತಾರೆ. ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮಾಡಬೇಕು ಅಂತ ಹಿಂದಿನಿಂದಲೂ ಹೇಳಿದ್ದಾರೆ.

ಹಿಂದಿನ ಸಿಎಂ ಯಡಿಯೂರಪ್ಪ ಅವರು ಹಾಗೂ ಅಂದಿನ ಕೇರಳ ಸಿಎಂ ಚರ್ಚೆ ಮಾಡಿದ್ರು. ಆದ್ರೂ ಸಂಚಾರ ಲಿಫ್ಟ್ ಮಾಡಿರಲಿಲ್ಲ. ಅದು ಮೀಸಲು ಅರಣ್ಯ ಪ್ರದೇಶವಾಗಿತ್ತು. ಹಾಗಾಗಿ ಯಾವುದೇ ಕಾರಣಕ್ಕೂ ರಾತ್ತಿ ಸಂಚಾರ ಅನುಮತಿ ಕೊಡದಿರಲು ಯಡಿಯೂರಪ್ಪ ನಿರ್ಧಾರ ಮಾಡಿದ್ರು. ಈಗ ಖಂಡ್ರೆ ಅವರು ಹೇಳಿಕೆ ಕೊಟ್ಟಿದ್ದಾರೆ. ಎಮರ್ಜೆನ್ಸಿ ವಾಹನ ಓಡಾಡಲು ಅನುಮತಿ ಕೊಡ್ತೀವಿ ಅಂತ. ಕಾಂಗ್ರೆಸ್ ತಮ್ಮ‌ ಹೈಕಮಾಂಡ್ ಮೆಚ್ಚಿಸಲು, ಜನ ವಿರೋಧಿ ನೀತಿ ಅನುಸರಿಸಿದೆ. ಅರಣ್ಯ ಪ್ರಾಣಿಗಳ ವಿರೋಧಿ ನೀತಿ ತೆಗೆದುಕೊಂಡಿದ್ದಾರೆ. ರಾಜ್ಯದ ಹಿತಾಸಕ್ತಿ ವಿರುದ್ಧ ನಡೆದುಕೊಳ್ತಿದೆ ಇದನ್ನ ಬಿಜೆಪಿ ಖಂಡಿಸಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ