16 ಮುಸ್ಲಿಂ ಯುವಕರ ಬಂಧನ : ಪಿಎಫ್ಐ ಸಂಘಟನೆಯ ಗೌಪ್ಯ ಸಭೆ

ಮಂಗಳವಾರ, 29 ಅಕ್ಟೋಬರ್ 2019 (15:46 IST)
ಗ್ರಾಮದ ಬಳಿ ಗುಪ್ತ ಸ್ಥಳದಲ್ಲಿ  ಪಿಎಫ್ ಐ ಸಂಘಟನೆಯ ಚಟುವಟಿಕೆಯನ್ನು ಗೌಪ್ಯವಾಗಿ ನಡೆಸುತ್ತಿದ್ದ 16 ಮಂದಿ ಮುಸ್ಲಿಂ ಯುವಕರನ್ನು  ಪೊಲೀಸರು  ಬಂಧಿಸಿದ್ದಾರೆ.

ಮಂಡ್ಯ ಆಲಂಬಾಡಿ ಕಾವಲು ಗ್ರಾಮದ ಬಳಿ  ಗುಪ್ತ ಸ್ಥಳದಲ್ಲಿ  ಪಿಎಫ್ ಐ ಸಂಘಟನೆಯ ಚಟುವಟಿಕೆಯನ್ನು ಗೌಪ್ಯವಾಗಿ  ನಡೆಸುತ್ತಿದ್ದ 16 ಮಂದಿ ಮುಸ್ಲಿಂ ಯುವಕರನ್ನು  ಪೊಲೀಸರು  ಬಂಧಿಸಿ ಜೈಲಿಗಟ್ಟಿರುವ ಘಟನೆ ನಡೆದಿದೆ.

ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರೆನ್ನಲಾದ ಹುಣಸೂರಿನ ರೌಡಿಶೀಟರ್ ಮುಬಾರಕ್ ಷರೀಫ್ ಎಂಬಾತನ ನೇತೃತ್ವದಲ್ಲಿ  ಯಾರಿಗೂ ತಿಳಿಯದಂತೆ ದೇವಮ್ಮ ಎಂಬುವವರ ಕಬ್ಬಿನ ಗದ್ದೆಯೊಳಗೆ  ಪರೇಡ್ ನಡೆಸುತ್ತಿದ್ದರು.

 ಆರೋಪದ ಮೇರೆಗೆ ಕೆ.ಆರ್.ಪೇಟೆ ಪಟ್ಟಣದ ನಿವಾಸಿಗಳಾದ ನಜೀಬ್ (26), ಇಮ್ರಾನ್ ಖಾನ್ (28), ಸಲ್ಮಾನ್ (30), ಸಫೀರ್ (28),  ನದೀಮ್ (26), ಮಹಮ್ಮದ್ ಖಲೀಲ್ (24), ಮಹಮ್ಮದ್ ಸಲ್ಮಾನ್ (24), ಸುಹೇಲ್ (24), ಸೈಯದ್ ರಿಯಾಜ್ (28), ಸಲ್ಮಾನ್ (28), ಸಯ್ಯದ್ ಷರೀಫ್ (19), ಸಯ್ಯದ್ ಸರವರ್ (22), ಸಯ್ಯದ್ ಜುಬೇರ್ (22), ಮಹಮದ್‌ ನದೀಂ (23), ಸದ್ದಾಂ (20) ಬಂಧಿತರು.

ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ