ವಿಧಾನಸೌಧದ ಬಳಿ 2.5 ಕೋಟಿ ಹಣ ಪತ್ತೆ: ಯಡ್ಡಿಗೆ ಮಾಹಿತಿಯಿತ್ತು ಎಂದ ಕುಮಾರಸ್ವಾಮಿ

ಸೋಮವಾರ, 24 ಅಕ್ಟೋಬರ್ 2016 (14:02 IST)
ವಿಧಾನಸೌಧದ ಬಳಿ 2.5 ಕೋಟಿ ಹಣ ಪತ್ತೆ ಪ್ರಕರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಸಂಪೂರ್ಣ ಮಾಹಿತಿ ಗೊತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಬಳಿ ದೊರೆತಿರುವ 2.5 ಕೋಟಿ ಅಕ್ರಮ ಹಣ ಏಲ್ಲಿಂದ ಏಲ್ಲಿಗೆ ರವಾನೆಯಾಗುತ್ತಿತ್ತು ಎಂದು ಬಿಎಸ್‌ವೈಗೆ ಸಂಪೂರ್ಣ ಮಾಹಿತಿ ಇತ್ತು ಎಂದು ಆರೋಪಿಸಿದರು.
 
ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಿದ್ದು ಜೆಡಿಎಸ್ ಪಕ್ಷ, ಹಾಗಾದರೇ ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದರು. 
 
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಎಚ್‌ಡಿಕೆ.....
 
ದಲಿತ ಪರ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತ ಸಮುದಾಯದ ಅಭಿವೃದ್ಧಿಗೆ ಏಷ್ಟು ಖರ್ಚು ಮಾಡಿದ್ದಾರೆ ಸಾರ್ವಜನಿಕವಾಗಿ ಬಹಿರಂಗ ಪಡಿಸಲಿ ಆಗ್ರಹಿಸಿದರು.
 
ಬರಗಾಲ ಪರಿಸ್ಥಿತಿಯಿಂದ ರಾಜ್ಯ ತೀರ್ವ ಸಂಕಷ್ಟ ಅನುಭವಿಸುತ್ತಿದ್ದರು ನಿಗಮ ಮಂಡಳಿ ನೇಮಕ ಮಾಡಲು ಸಿಎಂ ಸಿದ್ದರಾಮಯ್ಯ ಒದ್ದಾಡುತ್ತಿದ್ದಾರೆ. ಇಂತ ಸಮಯದಲ್ಲಿ ನಿಗಮ ಮಂಡಳಿ ನೇಮಕಾತಿ ಬೇಕಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ