ಗಾಜನೂರು ಡ್ಯಾಂ ತುಂಬಲು 2 ಅಡಿ ಬಾಕಿ

ಶುಕ್ರವಾರ, 7 ಜುಲೈ 2023 (14:54 IST)
ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಅತಿ ಚಿಕ್ಕ ಗಾಜನೂರು ತುಂಗಾ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಇದರಿಂದಾಗಿ ಯಾವುದೇ ಕ್ಷಣದಲ್ಲೂ ನೀರನ್ನು ಹೊರಬಿಡುವ ಸಾಧ್ಯತೆ ಇದೆ.. 588.24 ಮೀಟರ್ ಗರಿಷ್ಠ ಮಟ್ಟದ ಈ ಗಾಜನೂರು ಜಲಾಶಯದಲ್ಲಿ ಪ್ರಸ್ತುತ 587.54 ಮೀಟರ್ ನಷ್ಟು ನೀರಿದೆ. ಪೂರ್ಣ ಪ್ರಮಾಣದ ಭರ್ತಿಗೆ 2 ಅಡಿ ಮಾತ್ರ ಬಾಕಿ ಇದೆ.. ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ, ನದಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಕ್ಷಣದಲ್ಲೂ ನೀರು ಹೊರ ಬಿಡುವ ಸಾಧ್ಯತೆ ಇದೆ. ಅಂದಹಾಗೆ, ಹೊಸಪೇಟೆ ತುಂಗಾಭದ್ರಾ ಜಲಾಶಯ ತುಂಬಲು ತುಂಗಾ ನೀರೇ ಪ್ರಮುಖ ಆಧಾರವಾಗಿದ್ದು, ಈ ಗಾಜನೂರು ತುಂಗಾ ಜಲಾಶಯದಿಂದ ನದಿಗೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ನೀರು ಹೊರಬಿಡುವ ಸಾಧ್ಯತೆ ಹೆಚ್ಚಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ