ಜನವರಿ 7 ರಂದು ನಡೆಯಲಿರುವ 20 ನೇ ವರ್ಷದ ಚಿತ್ರಸಂತೆ

ಗುರುವಾರ, 5 ಜನವರಿ 2023 (15:53 IST)
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ಸುದ್ದಿಗೋಷ್ಠಿ ನಡೆಸಿದ್ದು,೨೦ ನೇ ವರ್ಷದ ಚಿತ್ರಸಂತೆ ಇದೇ ಜನವರಿ ೮ ರಂದು ನಡೆಯಲಿದೆ.೨೦೨೨-೨೩ನೇ ಸಾಲಿನ ಪ್ರಶಸ್ತಿ ಪ್ರಧಾನ ಇದೇ ಜನವರಿ ೭ ರಂದು ನಡೆಯಲಿದೆ.ಪ್ರತಿ ಚಿತ್ರಸಂತೆಯಲ್ಲಿ ೫ ಅವಾರ್ಡ್ ಗಳನ್ನ ಕೊಡುತ್ತೇವೆ.ಪ್ರೊ.ಎಂಎಸ್ ನಂಡುಂಡರಾವ್ ಪ್ರಶಸ್ತಿ, ಹೆಚ್.ಕೆ ಕೇಜ್ರಿವಾಲ್ ಪ್ರಶಸ್ತಿ, ಎಂ.ಆರ್ಯಮೂರ್ತಿ ಪ್ರಶಸ್ತಿ, ಡಿ.ದೇವರಾಜ ಅರಸು ಪ್ರಶಸ್ತಿ, ವೈ ಸುಬ್ರಮಣ್ಯರಾಜು ಪ್ರಶಸ್ತಿಯನ್ನ ಕೊಡಲಾಗುತ್ತೆ.ಪ್ರೊ.ಎ.ಎಸ್ ನಂಜುಂಡರಾವ್ ಪ್ರಶಸ್ತಿಗೆ ೧ ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತೆ.ಉಳಿದ ಪ್ರಶಸ್ತಿಗಳಿಗೆ ೫೦ ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತೆ.ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ‌ ಎಂದು ಹೇಳಿದ್ರು.
 
ಕಲಾ ಪ್ರದರ್ಶನದ ಉದ್ಘಾಟನೆಯನ್ನ ಡಾ.ಸಿ.ಎನ್ ಅಶ್ವಥ್ ನಾರಯಣ್ ಮಾಡಲಿದ್ದಾರೆ.ರಾಜ್ಯದ ಮೂಲೆಮೂಲೆಗಳಿಂದ ಕಲಾಕಾರರು ಭಾಗವಹಿಸಲಿದ್ದಾರೆ.ಹೊರ ರಾಜ್ಯಗಳಿಂದ ಬರುವವರಿಗೆ ಉಚಿತವಾಗಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ.ದಿವ್ಯಂಗರು ೧೬ ಕಲಾಕಾರರು ಭಾಗವಹಿಸುತ್ತಿದ್ದಾರೆ.೨೩೦೦ ಮಂದಿ ಅರ್ಜಿ ಸಲ್ಲಿಸಿದ್ದರು.ಆ ಪೈಕಿ ೧೩೦೦ ಕಲಾಕಾರರು ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದೇವೆ.ಅವರಿಗೆಲ್ಲ ಸೂಕ್ತ ವ್ಯವಸ್ಥೆಯನ್ನ ಕಲ್ಪಿಸಿದ್ದೇವೆ.ರಸ್ತೆ ಮೇಲೆ ೧೨೦೦ ಸ್ಟಾಲ್ ಗಳನ್ನ ಹಾಕಲಾಗುತ್ತೆ.ಸೀನಿಯರ್ಸ್ ಹಾಗೂ ಅಂಗವಿಕಲರಿಗೆ ಒಳಗಡೆ ಅವಕಾಶ ಮಾಡಿಕೊಟ್ಟಿದ್ದೇವೆ.ಸಾರಿಗೆ, ಪೊಲೀಸ್, ಪಾಲಿಕೆ ಸೇರಿದಂತೆ ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆದಿದ್ದೇವೆ.ಕೋವಿಡ್ ಹಿನ್ನಲೆ ಮಾಸ್ಕ್ ಹಾಗೂ ಸ್ಯಾನಿಟೇಷನ್‌ ಕಡ್ಡಾಯ ಮಾಡಿದ್ದೇವೆ.ಗ್ರಾಹಕರು ಸಾಮಾಜಿಕ ಅಂತರ ಫಾಲೋ ಮಾಡಬೇಕು ಅಂತಾ ಮನವಿ ಮಾಡಿದ್ದೇವೆ.೧೩೦ ರಷ್ಟು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೇವೆ.೪೦೦ ಮಂದಿ ವಿದ್ಯಾರ್ಥಿಗಳು ಹಾಗೂ ೫೦ಕ್ಕೂ ಹೆಚ್ಚು ವಾಕಿಟಾಕಿನೊಂದಿಗೆ ಕೆಲಸ ಮಾಡಲಿದ್ದಾರೆ.ರಾತ್ರಿ ಚಿತ್ರಸಂತೆ ಮುಗಿದ ಮೇಲೆ ರಾತ್ರಿ ೧೧ ಗಂಟೆಗೆಲ್ಲ ಕಂಪ್ಲೀಟ್ ಕ್ಲೀನ್ ಮಾಡಲು ವ್ಯವಸ್ಥೆ ಮಾಡಿದ್ದೇವೆ.ಚಿತ್ರಸಂತೆ ಯಶಸ್ವಿಯಾಗಿ ಮಾಡಲು ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದೇವೆ.ಈ ಬಾರಿಯ ಚಿತ್ರಸಂತೆ ಎಲ್ಲಾ ಕಲಾವಿದರಿಗೆ ಅರ್ಪಣೆ ಮಾಡಿದ್ದೇವೆ ಎಂದು ಹೇಳಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ