21 ಲಕ್ಷ ಮೌಲ್ಯದ ಬಿಯರ್, ಫೆನ್ನಿ ಸರ್ವನಾಶ

ಬುಧವಾರ, 10 ಜೂನ್ 2020 (18:00 IST)
21.22 ಲಕ್ಷದ ರೂಪಾಯಿ ಮೌಲ್ಯದ ಫೆನ್ನಿ ಹಾಗೂ ನೂರಾರು ಲೀಟರ್ ಬಿಯರ್ ನಾಶಪಡಿಸಲಾಗಿದೆ.

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 21.22 ಲಕ್ಷ ರೂ. ಅಂದಾಜು ಮೌಲ್ಯದ ಮದ್ಯವನ್ನು ಕಾರವಾರ ಅಬಕಾರಿ ಇಲಾಖೆಯವರು ನಾಶಪಡಿಸಿದ್ದಾರೆ.

ಅಬಕಾರಿ ಇಲಾಖೆಯವರು ದಾಖಲಿಸಿದ 85 ಪ್ರಕರಣಗಳಲ್ಲಿ 3,320 ಲೀಟರ್ ಭಾರತೀಯ ಮದ್ಯ, 3,338 ಲೀಟರ್ ಫೆನ್ನಿ ಹಾಗೂ 630 ಲೀಟರ್ ಬಿಯರ್ ಜಪ್ತಿಯಾಗಿತ್ತು.

ಅಬಕಾರಿ ಅಧಿಕಾರಿಗಳು ಈ ಮದ್ಯವನ್ನು ಜಪ್ತಿಪಡಿಸಿಕೊಂಡು ಕಚೇರಿಯಲ್ಲಿ ದಾಸ್ತಾನು ಇಟ್ಟಿದ್ದರು.  ಸರ್ಕಾರಿ ನಿಯಮಗಳ ಪ್ರಕಾರ ಮದ್ಯವನ್ನು ಸುರಿದು ನಾಶಪಡಿಸಬೇಕಿತ್ತು. ಅದರಂತೆ ಕಾರವಾರದ ಮಾಜಾಳಿ ಬಳಿಯ ನಿರುಪಯುಕ್ತ ಅರಣ್ಯ ಪ್ರದೇಶದಲ್ಲಿ ಅಕ್ರಮ ಮದ್ಯವನ್ನು ನಾಶಪಡಿಸಲಾಯಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ