ಎಣ್ಣೆ ಸಿಗ್ತಿದ್ದಂತೆ ಶುರುವಾಯ್ತು ಅಕ್ರಮ ಮದ್ಯ ಸಾಗಾಟ

ಸೋಮವಾರ, 4 ಮೇ 2020 (18:02 IST)
ಲಾಕ್ ಡೌನ್ ಸಡಿಲಿಕೆ ಮಾಡಿ ಎಣ್ಣೆ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಆದರೂ ಮದ್ಯ ಸಾಗಾಟ ಅಕ್ರಮವಾಗಿ ಮುಂದುವರಿದಿದೆ.

ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಸಿಬ್ಬಂದಿ ಬಂಧಿಸಿ ಆತನಿಂದ 1 ಲಕ್ಷ 51 ಸಾವಿರದ 500 ರೂ. ಮೌಲ್ಯದ ಮದ್ಯ ಜಫ್ತು ಮಾಡಿದ್ದಾರೆ.

ಅಂಕೋಲಾದ ಹೊನ್ನೆಬೈಲ್‌ನ ವಿನಾಯಕ ನಾಗಪ್ಪ ನಾಯ್ಕ ಬಂಧಿತ ಆರೋಪಿ.  134.250 ಲೀ. ಗೋವಾ ಮಧ್ಯವನ್ನು ಸಾಗಿಸುತ್ತಿದ್ದನು. ಇನ್ನೊಬ್ಬ ಆರೋಪಿ ಸಂದೀಪ ಮೋಹನ ಗಾಂವಕರ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ