22 ವರ್ಷದಿಂದ ತಲೆಮರೆಸಿಕೊಂಡಿದ್ದ ಅಂತರ್ ರ್ರಾಜ್ಯ ಕಳ್ಳರ ಬಂಧನ

ಮಂಗಳವಾರ, 28 ಫೆಬ್ರವರಿ 2023 (16:56 IST)
ಅದೊಂದು ಖತರ್ನಾಕ್ ಅಂತರಾಜ್ಯ ಗ್ಯಾಂಗ್.ಕೇವಲ ಶಾಲಾ ಕಾಲೇಜುಗಳನ್ನೇ ಟಾರ್ಗೆಟ್ ಮಾಡ್ತಿದ್ರು.ರಾತ್ರೋ ರಾತ್ರಿ ಬಂದು ದೋಚಿ ಹೋಗ್ತಿದ್ರು.ಹೀಗೆ ಹೋಗುತ್ತಿದ್ದವರು 22 ವರ್ಷದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ರು.ಆದ್ರೆ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾರೆ.‌ಕಳ್ಳಬೆಕ್ಕಿನಂತೆ ಎಂಟ್ರಿ ಕೊಡ್ತಿರೊ ಇವರು ಸಾಮಾನ್ಯದವ್ರಲ್ಲ.ಶಾಲಾ ಕಾಲೇಜುಗಳನ್ನೇ ಟಾರ್ಗೆಟ್ ಮಾಡ್ತಿದ್ರು.ರಾತ್ರೋ ರಾತ್ರಿ ಬ್ಯಾಗ್ ಚೀಲ‌ ಹಿಡಿದು ಬರ್ತಿದ್ರು.ಹೀಗೆ ಬರೊ‌ ಖತರ್ನಾಕ್ ಗಳು ಎಲೆಕ್ಟ್ರಾನಿಕ್ ವಸ್ತುಗಳು,ಲ್ಯಾಪ್ ಟ್ಯಾಪ್, ಮತ್ತು ನಗದು ಹಣವನ್ನೆಲ್ಲ ಗುಡಿಸಿ ಗಂಡಾಂತರ ಮಾಡಿಬಿಡ್ತಿದ್ರು.

ವೀರಮಲೈ ಹಾಗೂ ಬಾಬು.ಮೂಲತಃ ತಮಿಳುನಾಡಿನ ಸೇಲಂ ನವ್ರು.ಈ ಖತರ್ನಾಕ್ ಗಳು ಅಂತಿಂಥವರಲ್ಲ.ಇವ್ರು ಮಾಡಿರೊ ಕೆಲಸ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತಿರಾ.ಈ ಆಸಾಮಿಗಳು ತಮಿಳುನಾಡಿನವನಾದ್ರು ಮಾಡೋ ಕಳತನ ಕೃತ್ಯಕ್ಕೆ ರಾಜ್ಯದ ಗಡಿ ಅನ್ನೋದೇ ಇಲ್ಲ.2001 ರಿಂದ ಶಾಲಾ ಕಾಲೇಜುಗಳನ್ನೇ ಟಾರ್ಗೆಟ್ ಮಾಡ್ತಿದ್ದ ಆರೋಪಿಗಳು ರಾತ್ರೋ ರಾತ್ರಿ ಬಂದು ಎಲೆಕ್ಟ್ರಾನಿಕ್ ವಸ್ತುಗಳು,ಲ್ಯಾಪ್ ಟಾಪ್ ಹಾಗೂ ಹಣ ಕದ್ದು ಪರಾರಿಯಾಗ್ತಿದ್ರು.ಆದರೆ ಇದುವರೆಗೂ ಪೊಲೀಸರ ಕೈಗೆ ಸಿಗದೇ 22 ವರ್ಷದಿಂದ ತಲೆಮರೆಸಿಕೊಂಡು ಓಡಾಡ್ತಿದ್ರು.ಆದ್ರೆ ಕೊನೆಗೂ ಜ್ಙಾನಭಾರತಿ ಠಾಣೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.ಆರೋಪಿಗಳ ಬಂಧನದಿಂದ ಜ್ಙಾನಭಾರತಿ,ಹುಳಿಮಾವು,ಕೋಲಾರ,ದಾವಣಗೆರೆ,ಕೆ.ಆರ್ ಪುರಂ,ಆವಲಹಳ್ಳಿ ಸೇರಿದಂತೆ 12 ಪ್ರಕರಣ ಬೆಳಕಿಗೆ ಬಂದಿದೆ.

 ಆರೋಪಿಗಳು..ಮಾರ್ಚ್ ,ಏಪ್ರಿಲ್,ಮೇ ತಿಂಗಳನ್ನೇ ಟಾರ್ಗೆಟ್ ಮಾಡ್ತಿದ್ರು.ಯಾಕಂದ್ರೆ ಜೂನ್ ನಲ್ಲಿ ಶಾಲಾ ಕಾಲೇಜು ಪ್ರಾರಂಭ ಆಗೋದ್ರಿಂದ ಅಡ್ಮಿಷನ್ ಪ್ರಕ್ರಿಯೆ ನಡೆಯುತ್ತಿರುತ್ತೆ.ಆಗ ಹೆಚ್ಚಾಗಿ ದುಡ್ಡು ಕೂಡ ಸಂಗ್ರಹ ಆಗಿರುತ್ತೇ ಅನ್ನೋ ಲೆಕ್ಕಾಚಾರದಲ್ಲಿ ಇರ್ತಿದ್ರು.ಕಳ್ಳತನ ಎಸಗಿ ಖಾಸಗಿ ಬಸ್ ಹತ್ತಿ ತಮಿಳುನಾಡು ಸೇರಿಕೊಳ್ತಿದ್ರು‌.ನಂತರ ಮುಂಬೈಗೆ ತೆರಳಿ ಕದ್ದ ಮಾಲು ಮಾರಾಟ ಮಾಡ್ತಿದ್ರು.ಹೀಗೆ ಜ್ಙಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಚೈತನ್ಯ ಮತ್ತು ವಿಎಸ್ಎಸ್ ಶಾಲೆಯಲ್ಲಿ ಕಳ್ಳತನ ಎಸಗಿ ಪರಾರಿಯಾಗಿದ್ರು.ಸದ್ಯ ಆರೋಪಿಗಳನ್ನ ಬಂಧಿಸಿರೊ‌ ಜ್ಙಾನಭಾರತಿ ಠಾಣೆ ಪೊಲೀಸರು ಐದು ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತು ಮತ್ತು ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿರೊ‌ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ವಿಚಾರಣೆ ವೇಳೆ ಮತ್ತಷ್ಟು ಪ್ರಕರಣ ಬೆಳಕಿಗೆ ಬರೊ ಸಾಧ್ಯತೆ ಇದೆ
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ