ಖಾಸಗಿ ಕಾಲೇಜುಗಳ ಫೀಸ್ ಹಾವಳಿ

ಮಂಗಳವಾರ, 28 ಫೆಬ್ರವರಿ 2023 (16:46 IST)
ಖಾಸಗಿ ಕಾಲೇಜುಗಳ ಫೀಸ್ ಹಾವಳಿ ಇತ್ತೀಚೆಗೆ ಹೆಚ್ಚಾಗುತ್ತಿದೆ  ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಡೊನೇಷನ್ ಹಾವಳಿ ಹೆಚ್ಚಾಗಿದ್ದು  ಇಲಾಖೆ  ನಿರ್ಧರಿಸೋ ಶುಲ್ಕದ ಜೊತೆ ಲಕ್ಷ ಲಕ್ಷ‌ ಕೊಟ್ಟರೆ ಮಾತ್ರ ಖಾಸಗಿ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಕೊಳ್ಳುತ್ತಿದ್ದಾರೆ. ಇಲ್ಲವಾದಲ್ಲಿ ಅಡ್ಮಿಷನ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಮೆಂಟಲ್ ಟಾರ್ಚರ್  ನೀಡುತ್ತಿದ್ದಾರೆ. ಸಿಇಟಿಲಿ ಉತ್ತಮ ರ್ಯಾಂಕ್ ಪಡೆದ್ರೂ ಪ್ರತಿಭಾವಂತ ವಿದ್ಯಾರ್ಥಿಗಳು ಲಕ್ಷ ಲಕ್ಷ ಫೀಸ್ ಕಟ್ಟಲೇಬೇಕು  ಕೆಇಎ ನಿರ್ಧರಿಸಿದ ಶುಲ್ಕದ ಜೊತೆ ಡಬಲ್ ಫೀಸ್‌ ಕಟ್ಟಬೇಕಂತೆ ಎಂಬಿಎ ಪಿಜಿ‌ ಕೋರ್ಸ್ ಗೆ ಪ್ರತಿ ವರುಷ 66 ಸಾವಿರ ಕೆಇಎ ಶುಲ್ಕ ನಿಗದಿ ಆದರೆ ಕೆಇಎ ಸೂಚಿಸಿದ ಖಾಸಗಿ ಕಾಲೇಜು ಶುಲ್ಕದ‌ ಜೊತೆ 4-6 ಲಕ್ಷದವರೆಗೆ ಶುಲ್ಕ ಕೇಳುತ್ತ್ತಿದ್ದಾರೆ ಯಾಕಿಷ್ಟು ಹೆಚ್ಚು ಫೀಸ್ ಅಂದ್ರೆ‌ ಪ್ಲೇಸ್ ಮೆಂಟ್, ಕೋಚಿಂಗ್ ಅಂತಾರಂತೆ  ಖಾಸಗೀ ಶಾಲೆಗಳು ಕಥೆ ಕಟ್ಟುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ