ಹೊಸದಾಗಿ ಆರೋಗ್ಯ ಇಲಾಖೆ ಪಾಳಯ ಸೇರಲಿವೆ 265 ಆರೋಗ್ಯ ಕವಚ ಆಂಬ್ಯುಲೆನ್ಸ್

ಗುರುವಾರ, 10 ಆಗಸ್ಟ್ 2023 (16:01 IST)
ಅನೇಕ ಎಡವಟ್ಟುಗಳಿಗೆ ಆಂಬ್ಯುಲೆನ್ಸ್ ಟೆಂಡರ್ ಎಡೆಮಾಡಿಕೊಟ್ಟಿದ್ದು,ಈಗ ಕ್ಲಿಯರ್ ಆಗಿದ್ದು.ಟೆಂಡರ್ ಪ್ರಕ್ರಿಯೆ ಬಾಕಿ ಇರುವಾಗಲೇ ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ರಾಜ್ಯದಲ್ಲಿ ಇನ್ಮುಂದೆ  265 ಆಧುನಿಕ ತಂತ್ರಜ್ಞಾನ  ಹೊಂದಿರೋ ಆರೋಗ್ಯ ಕವಚ ಆಂಬ್ಯುಲೆನ್ಸ್ ಗಳು ಓಡಾಡಲಿದೆ.ಇದಕ್ಕಾಗಿ ತಾಂತ್ರಿಕ ಸಮಿತಿ ರಚನೆ ಆರೋಗ್ಯ ಇಲಾಖೆ ಮಾಡಿದೆ.
 
ಪ್ರತಿ ವರ್ಷ ಆರೋಗ್ಯ ಕವಚ ಆಂಬ್ಯುಲೆನ್ಸ್ ಗಳ ಸ್ಥಿತಿ ಗತಿ ಯನ್ನು ಪರೀಶಿಲಿಸಿ ಹೊಸ ವಾಹನಗಳ ಖರೀದಿ ಇಲಾಖೆ ಮಾಡುತ್ತಿದ್ದು,ಈ ಬಾರಿ ವಿಭಿನ್ನ ಪ್ರಯತ್ನಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.ಆಧುನಿಕ ಹಾಗೂ ವಿಶೇಷ ಸೌಲಭ್ಯಗಳನ್ನು ಹೊಂದಿರುವ ವಾಹನಗಳ ಖರೀದಿಗೆ ಇಲಾಖೆ ಮುಂದಾಗಿದೆ.ಸದ್ಯ ರಾಜ್ಯದಲ್ಲಿ ಸೇವೆ ನೀಡುತ್ತಿರುವ  ಒಟ್ಟು 711 ಆರೋಗ್ಯ ಕವಚ ವಾಹನಗಳು,ಹೊಸದಾಗಿ 265 ವಾಹನಗಳ ಸೇರ್ಪಡೆ ಬಳಿಕ ಹಳೆ ವಾಹನಗಳ ಬದಲಾವಣೆಗೆ ಚಿಂತನೆ ನಡೆಸಲಾಗಿದೆ.ಹಳೆ ವಾಹನಗಳ ಬದಲಾವಣೆಗೆ ಹೊಸ ನಿಯಮ ಜಾರಿಯಾಗಲಿದೆ.
 
ಒಂದು  ಆರೋಗ್ಯ ಕವಚ ವಾಹನದ ಫಿಟ್ ನೆಸ್ 3 ವರ್ಷಕ್ಕೆ ಇಳಿಕೆಯಾಗಲಿದ್ದು,ಈ ಹಿಂದೆ 3 ರಿಂದ 4 ವರ್ಷಗಳ ಕಾಲ ಓಡಾಡುತ್ತಿದ್ದ ಆರೋಗ್ಯ ಕವಚ ಆಂಬ್ಯುಲೆನ್ಸ್ ಗಳು ಮತ್ತು ಅತೀ ಹೆಚ್ಚು ಆರೋಗ್ಯ ಕವಚ ವಾಹನ ಓಡಾಡಿದ ಕೂಡಲೇ ಬದಲಾವಣೆಗೆ ನಿರ್ಧಾರ ಮಾಡಲಾಗಿದೆ.ಪ್ರತಿ ನಿತ್ಯ 100 ರಿಂದ 150 ಕಿ. ಓಡಾಡುತ್ತಿರುವ ವಾಹನಗಳ ಪರೀಶೀಲನೆ ನಡೆಸಿ ವಾಹನಗಳ ಸ್ಥಿತಿ ಗತಿ ಹಾಗೂ ರೋಗಿಗಳ ಮೇಲಿನ ಕಾಳಜಿಯಿಂದ ಉತ್ತಮ ಗುಣಮಟ್ಟದ ಆರೋಗ್ಯ ಕವಚ 108 ಆಂಬ್ಯುಲೆನ್ಸ್ ಒದಗಿಸಲು ನಿರ್ಧಾರ ಮಾಡಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ