ಹಾಸನದಲ್ಲಿ ಹೆಚ್ಚುತ್ತಿವೆ ಡೆಂಘೀ ಪ್ರಕರಣಗಳು

ಭಾನುವಾರ, 6 ಆಗಸ್ಟ್ 2023 (14:00 IST)
ಹಾಸನದಲ್ಲಿ ದಿನೆ ದಿನೇ ಡೆಂಘೀ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.ಜಿಲ್ಲೆಯಲ್ಲಿ ಈವರೆಗೂ 85 ಡೆಂಘೀ ಹಾಗೂ 35 ಚಿಕೂನ್ ಗುನ್ಯಾ ಪ್ರಕರಣಗಳೂ ಪತ್ತೆಯಾಗಿದೆ.. ಗ್ರಾಮಾಂತರ ಭಾಗದಲ್ಲಿಯೇ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ನಿನ್ನೆ ಅರಸೀಕೆರೆಯಲ್ಲಿ ಡೆಂಘೀಗೆ ಬಾಲಕನೊರ್ವ ಸಾವನಪ್ಪಿದ್ದಾನೆ.ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಜನರನ್ನು ಡೆಂಘಿ ಜ್ವರ ಕಾಡುತ್ತಿದ್ದರೂ ಸೋಂಕು ತಡೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬಾಲಕನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಾಲಕನ ಸಾವಿನಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದ್ದು, ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ