29 ವರ್ಷದ ಗೌತಮ್ ಎಂಬ ಯುವಕ ನೇಣಿಗೆ ಶರಣು

ಗುರುವಾರ, 10 ಆಗಸ್ಟ್ 2023 (20:04 IST)
ಆತನಿಗೆ ಬೇಕಾದಷ್ಟು ಶ್ರೀಮಂತಿಕೆ  ಇತ್ತು ಆದರೆ ನೆಮ್ಮದಿ ಇರಲಿಲ್ಲ.  ಹಲವು ದಿನಗಳಿಂದಲೂ ನೆಮ್ಮದಿ ಇಲ್ಲದೆ ಪರಿತಪಿಸುತ್ತಿದ್ದವನು ಕೊನೆಗೆ ಅದೊಂದು ನಿರ್ಧಾರಕ್ಕೆ ಬಂದಿದ್ದ. ಅದು ಸಾವು. ಯಸ್ ಯುವಕನೊಬ್ಬನ ಆತುರದ ನಿರ್ಧಾರದಿಂದ ಇಡೀ ಜಿವನ‌ ಕಳೆದುಕೊಂಡಿದ್ದಾನೆ . ಗೌತಂ ಎಂಬ ಯುವಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ‌. ವಯಸ್ಸು ಇನ್ನೂ 29 ವರ್ಷ . ಮನೆಯಲ್ಲಿ ಮದ್ವೆಗಾಗಿ ಹೆಣ್ಣು ಕೂಡ ಹುಡುಕುತಿದ್ರು. ಆದ್ರೆ ಇಂದು ಮಧ್ಯಾಹ್ನದ ವೇಳೆ ತಂದೆ ಬಾಗಿಲು ತೆರೆದು ನೋಡಿದಾಗ ಗೌತಂ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಚಂದ್ರಾಲೇಔಟ್ ಬಳಿ ಇರುವ ಅತ್ತಿಗುತ್ತೆಯಲ್ಲಿ ಮಡೆದ ಘಟನೆ ಇದು. ಗೌತಂ ತಂದೆ ದೊಡ್ಡಯ್ಯ  ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದವರು. ಮೂರು ಜನ ಮಕ್ಕಳಲ್ಲಿ ಗೌತಂ ಕೊನೆಯವನು.  ಕಳೆದ ಐದು ತಿಂಗಳಿನಿಂದ ಡಿಪ್ರೇಷನ್ ನಲ್ಲಿದ್ದನಂತೆ . ಇದರ ಬಗ್ಗೆ ಗಮನಿಸಿದ್ದ ತಂದೆ ಬಳಿ ಕೂಡ ಯಾವುದೇ ಸಮಸ್ಯೆಯ ಬಗ್ಗೆ ಹೇಳಿಕೊಳ್ತಿರಲಿಲ್ವಂತೆ . ಅವನೇ ಮದ್ವೆ ಮಾಡಿ ಎಂದ ಕಾರಣ ಆರು ತಿಂಗಳಿನಿಂದ ಹೆಣ್ಣು ಹುಡುಕುತ್ತಿದ್ರಂತೆ .ಹುಡುಗೀಯ ಫೋಟೊವನ್ನೂ ಕೂಡ ಕುಟುಂಬದವರೇ ತೋರಿಸಿದ್ರಂತೆ . ಮದ್ವೆಯಾದಮೇಲ ಸರಿ ಹೋಗ್ತಾನೆ ಎಂದು ಕುಟುಂಬದವರೂ ಸುಮ್ಮನಾಗಿದ್ರು. ನೆನ್ನೆ ಕೂಡ ಎಂದಿನಂತೆ ತಡರಾತ್ರಿ ಮನೆಗೆ ಆಗಮಿಸಿದ್ದ. ನಂತರ ತನ್ನ ಕೊಠಡಿ ಸೇರಿಕೊಂಡಿದ್ದ. ಇಂದು ಮಧ್ಯಾಹ್ನ  ಊಟಕ್ಕೆಂದು ಕರೆಯಲು ಹೋಗಿದ್ದರಂತೆ .  ಆಗ ಬಾಗಿಲು ತೆರಯಲಿಲ್ಲ. ಗೌತಂ ಮೊಬೈಲ್ ಗೂ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಅದೂ ಅಲ್ಲದೆ ಕೋಣೆಯಿಂದ ವಾಸನೆ ಬಂದ ಹಿನ್ನಲೆ ತನ್ನ ಇಬ್ಬರು ಮಕ್ಕಳ ಜೊತೆ ಬಾಗಿಲಿ ಒಡೆದು ನೋಡಿದಾಗ ಗೌತಂ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಸದ್ಯ ಈ ಸಂಬಂಧ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೂರು ದಾಕಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ