ಡಿಸಿಎಂ ಡಿಕೆಶಿವಕುಮಾರ್ ಕಾಮಗಾರಿ ಬಿಲ್ ಬಿಡುಗಡೆಗೆ ಕಮಿಷನ್ ಆರೋಪ....!

ಬುಧವಾರ, 9 ಆಗಸ್ಟ್ 2023 (19:00 IST)
ರಾಜ್ಯ ಸರ್ಕಾರ ಟೇಕಾಪ್ ಆಗುತ್ತಿರುವಾಗಲೇ ಹಲವು ಅಡತಡೆಗಳು ಬರ್ತಾಯಿದ್ದಾವೆ.ಸಚಿವರ ಮೇಲೆ ಭ್ರಷ್ಟಾಚಾರ ಆರೋಪ,ಡಿಸಿಎಂ ಮೇಲೆ ಪರ್ಸಟೆಂಜ್ ಆರೋಪ,ಸಚಿವರು ಶಾಸಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಶಾಸಕರ ಅಸಮಧಾನ ಹೀಗೆ ಪಕ್ಷದ ಒಳಗೆ ಹೊರಗು ಸರ್ಕಾರಕ್ಕೆ ಕಂಟಕ ಶುರುವಾಗಿದೆ.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ.ಬಿಜೆಪಿ ಸರ್ಕಾರದಲ್ಲಿ 40% ರಾಜರೋಷವಾಗಿ ಚಾಲ್ತಿಯಲ್ಲಿದೆ ಎಂದು ಕಾಂಗ್ರೆಸ್‌ ಆರೋಪಿಸಿ ಪ್ರತಿಭಟನೆ ಮಾಡುತ್ತಲೆ ರಾಜ್ಯದ ಚುಕ್ಕಾಣಿ ಹಿಡಿದಿದೆ.ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಭ್ರಷ್ಟಾಚಾರ ಮುಕ್ತವಾಗಿ ಆಡಳಿತ ಮಾಡುತ್ತೇವೆ ಎಂದು  ಘಂಟಾಘೋಷವಾಗಿ ಹೇಳಿಕೊಂಡಿತ್ತು.ಈಗಾ ಅವರದೆ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದೆ ಈಗ ಈ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಸಚಿವರಿಂದ ಹಿಡಿದು ಡಿಸಿಎಂ ವರೆಗೂ ಕೇಳಿ ಬರುತ್ತಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಭ್ರಷ್ಟಾಚಾರ ವಿಚಾರ ಸದ್ದು ಮಾಡುತ್ತಿದೆ.ಗ್ಯಾರಂಟಿಗಳ ಜೋಶ್ ನಲ್ಲಿದ್ದ ಸರ್ಕಾರವನ್ನ ನಿದ್ದೆಗೆಡಿಸುವಾಗೆ ಸಾಲು ಸಾಲು ಆರೋಪಗಳು ಸರ್ಕಾರದ ಸುತ್ತಲು ಸುಳಿಯುತ್ತಿವೆ.ಕೃಷಿ ಸಚಿವ ಚೆಲುವರಾಯಸ್ವಾಮಿ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ.ಇತ್ತ ಡಿಸಿಎಂ ಡಿಕೆಶಿವಕುಮಾರ್ ಬೆಂಗಳೂರು ವ್ತಾಪ್ತಿಯಲ್ಲಿ ಆಗಿರುವಂತ ಕಾಮಗಾರಿಗಳ ಬಿಲ್ ಬಿಡುಗಡೆಗೆ 10 ರಿಂದ 15 ಪರ್ಸಟೆಂಜ್ ಹಣ ಕೇಳುತ್ತಿದ್ದಾರೆ.ಇದು ಸುಳ್ಳು ಅನ್ನುದಾದರೇ ಡಿಸಿಎಂ ಅವರು ನೋಣವಿನಕೇರೆ ಅಜ್ಜಯಯ್ಯನ ಮೇಲೆ ಆಣೆ ಮಾಡಿ ಹೇಳಲಿ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ.

ಡಿಸಿಎಂ ಡಿಕೆಶಿವಕುಮಾರ್ ಮೇಲೆ ನೇರವಾಗಿ ಆರೋಪ ಮಾಡಿದ್ದ ಗುತ್ತಿಗೆದಾರರು ಇಂದು ಮಾಜಿ ಸಿಎಂ ಬಿ .ಎಸ್. ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಬೆಂಗಳೂರು ಅಭಿವೃದ್ಧಿ ಸಚಿವರ ಮೇಲಿನ ದೂರು ಹೇಳಿಕೊಂಡಿದ್ದಾರೆ.ಈ ಹಿನ್ನಲೆ ಯಡಿಯೂರಪ್ಪ ಭೇಟಿ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್ ಯಾರು ಸಲಹೆ ಕೊಡ್ತಿದ್ದಾರೆ ಗೊತ್ತಿದೆ.ಹೋಗುವವರನ್ನು ಯಾರೂ ತಡೆಯೋದಕ್ಕೆ ಆಗುವುದಿಲ್ಲ.ಅವರ ಹೋರಾಟಕ್ಕೆ ನ್ಯಾಯ ಸಿಗಲಿ, ಜಯ ಸಿಗಲಿ.ಯಾರು ಎಲ್ಲಿ ಹೋಗ್ತಿದಾರೆ ಸಲಹೆ ಕೊಡ್ತಿದ್ದಾರೆ ಅನ್ನುವುದನ್ನ ನಾವೂ ಗಮನಿಸುತ್ತಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ