ಆತ ರಾತ್ರಿ ಪೂರ್ತಿ ಜೊತೆಯಲ್ಲಿ ಪಾರ್ಟಿ ಮಾಡಿದ್ದಾನೆ, ಅದೇನಾಯ್ತೋ ಅವನಿಗೆ ಕುಡಿದ ನಶೆಯಲ್ಲಿ ಜೊತೆಯಲ್ಲಿ ದ್ದ ಸ್ನೇಹಿತನನ್ನೆ ಹತ್ಯೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. ಚೇತನ್ ಎಂಬ 21 ವರ್ಷದ ಯುವಕನನ್ನ ಭೀಕರವಾಗಿ ಕೊಲೆಗೈದಿರೋ ಅಮಾನುಲ್ಲ ಎಂಬಾತ ಕೊನೆಗೆ ತಾನೇ ಬಂದು ಪೊಲೀಸರಿಗೆ ಸೆರೆಂಡರ್ ಆಗಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮಗಟ್ಟ ಭಾಗದಲ್ಲಿ ಈ ಭೀಕರ ಕೊಲೆ ನಡೆದಿದೆ. ಕೊಲೆಯಾದ ಚೇತನ್ & ಆರೋಪಿ ಅಮಾನುಲ್ಲ ಮೊದಲಿಂದಲೂ ಪರಿಚತರೇ. ಆದರೆ ಇಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳ ಆಗ್ತಿತ್ತಂತೆ. ನಿನ್ನೆ ರಾತ್ರಿ ಈ ಇಬ್ಬರು ಕೊಮ್ಮಗಟ್ಟ ಗ್ರೌಂಡ್ ಬಳಿ ಮುಖಾಮುಖಿಯಾಗಿದ್ರು. ಈ ವೇಳೆ ಮತ್ತೆ ಇಬ್ಬರ ಮಧ್ಯೆ ಜಗಳ ಆಗಿದ್ದು, ಈ ವೇಳೇ ಅಮಾನುಲ್ಲ ಅಲ್ಲೇ ಇದ್ದ ಕಲ್ಲು ಎತ್ತಿಹಾಕಿ ಚೇತನ್ನನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.