ಇಂದು ಕಲಾಪದಲ್ಲಿ ವಿಶ್ವಾಸ ಮತ ಯಾಚನೆ ಮಾಡಬೇಕು ಅಂತ ರಾಜ್ಯಪಾಲರು 2ನೇ ಪತ್ರ ಬರೆದಿದ್ದಾರೆ.
ಮೈತ್ರಿ ಸರಕಾರದ ವಿಶ್ವಾಸ ಮತ ಸಾಬೀತು ಪಡಿಸೋಕೆ ರಾಜ್ಯಪಾಲರು ನೀಡಿದ್ದ ಗಡುವು ಮೀರಿದೆ. ಕಲಾಪಕ್ಕೆ 20 ಶಾಸಕರು ಗೈರಾಗಿದ್ದಾರೆ. ಈ ನಡುವೆ ಸಿಎಂ ವಿಶ್ವಾಸ ಮತ ಸಾಬೀತು ಪಡಿಸೋದಕ್ಕೆ ಮುಂದಾಗಿ ನಡೆದಿರೋ ಚರ್ಚೆ ಎರಡನೆ ದಿನಕ್ಕೆ ಕಾಲಿಟ್ಟಿಟ್ಟು, ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಸರಕಾರ ಉಳಿಸೋ ಮನಸ್ಸು ನನಗಿಲ್ಲ. ರಾಜ್ಯದಲ್ಲಿ ಆನಂದ್ ಸಿಂಗ್ ರಾಜೀನಾಮೆ ನೀಡಿದಾಗ್ಲೇ ಅಮೆರಿಕಾಕ್ಕೆ ಹೋಗಿದ್ದೆ. ಆದರೆ ಅಲ್ಲಿಂದ ಆತುರವಾಗಿ ನಾನೇನೂ ಬಂದಿಲ್ಲ. ಹೀಗಂತ ಸಿಎಂ ಹೇಳಿದ್ದಾರೆ.
ರಾಜ್ಯಪಾಲರು 2ನೇ ಪತ್ರ ಬರೆದಿದ್ದು, ಇಂದು ಸಂಜೆಯೊಳಗೆ ವಿಶ್ವಾಸ ಮತ ಯಾಚನೆಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಿಎಂಗೆ ಮತ್ತೆ ಅಗ್ನಿ ಪರೀಕ್ಷೆ ಶುರುವಾದಂತಾಗಿದೆ. ದೋಸ್ತಿ ಪಕ್ಷಗಳು ರಣತಂತ್ರಕ್ಕೆ ಮೊರೆ ಹೋಗಿವೆ.