ಜನರನ್ನು ಸೆಳೆಯುವ ಸಲುವಾಗಿ ಕೆಲ ರಾಜಕೀಯ ಮುಖಂಡರು ಅಭಿವೃದ್ಧಿ ಮಂತ್ರಿ ಪಠಿಸುತ್ತಾರೆ. ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ, ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಣ್ಣಿನಪಾಲ್ನಲ್ಲಿ 3 ಕೋಟಿ ಖರ್ಚು ಮಾಡಿ ನಿರ್ಮಿಸಲಾದ ರಸ್ತೆ ಮೂರೇ ತಿಂಗಳಿಗೆ ಢಮಾರ್ ಆಗಿದೆ. ಹೊರನಾಡು, ಮಾವಿನಹೊಲ, ಮಣ್ಣಿನ ಪಾಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ನಕ್ಸಲ್ ಪೀಡಿತ ಪ್ರದೇಶದ ರಸ್ತೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಸುಮಾರು 3 ಕಿಲೋ ಮೀಟರ್ ಕಾಂಕ್ರೀಟ್ ರಸ್ತೆ ಸಂಪೂರ್ಣ ಕಳಪೆಯಾಗಿದ್ದು, ಜನ ಓಡಾಡಿದ್ರೆ ಸಾಕು ಜಲ್ಲಿ ಪುಡಿ ಮೇಲೇಳುತ್ತಿದೆ. ಶಾಸಕ ಕುಮಾರಸ್ವಾಮಿಯೇ ಈ ರಸ್ತೆಯನ್ನು ಉದ್ಘಾಟಿಸಬೇಕೆಂದು ಶಾಸಕರ ಬೆಂಬಲಿಗರು ರಸ್ತೆಗೆ ಬೀಗ ಹಾಕಿದ್ರು. ಇದೇ ರಸ್ತೆ ಉದ್ಘಾಟನೆ ವಿಚಾರವಾಗಿ ಶಾಸಕ ವಿವಾದಕ್ಕೆ ಗುರಿಯಾಗಿದ್ರು.