ಬಿಎಂಟಿಸಿ ಇ-ಬಸ್ ಗಳಲ್ಲಿ ಪ್ರತಿದಿನ 3 ಲಕ್ಷ ಜನ ಪ್ರಯಾಣ

ಭಾನುವಾರ, 10 ಸೆಪ್ಟಂಬರ್ 2023 (16:12 IST)
ಹಸಿರು ನಗರ ಮತ್ತು ಸುಸ್ಥಿರ ಪ್ರಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ  ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಾರಂಭಿಸಿ ಒಂದೂವರೆ ವರ್ಷಗಳು ಕಳೆದಿದೆ. ನಗರದಲ್ಲಿ ಸದ್ಯ 390 ಈ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿವೆ. ಈ ಬಸ್ಗಳಲ್ಲಿ ಪ್ರತಿದಿನ ಸರಾಸರಿ 3 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ ಎಂದು ವರದಿಯಾಗಿದೆ.BMTC ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ ಇ-ಬಸ್ಗಳು ನವೀನತೆ, ಸುಸಜ್ಜಿತ ಸೌಕರ್ಯ ಮತ್ತು ಪರಿಸರ ಸ್ನೇಹಿಯಾಗಿವೆ. ಇ-ಬಸ್ಗಳು ಪ್ರತಿದಿನ ಒಟ್ಟು 80,000 ಕಿ.ಮೀ ಕ್ರಮಿಸುತ್ತವೆ. ಪ್ರತಿ ಕಿಮೀ 50 ರೂ. ಆದಾಯ ಬರುತ್ತದೆ. ಇದು ಸಾಮಾನ್ಯ ಬಸ್ಗಳಿಗಿಂತ 5 ರೂ. ಹೆಚ್ಚಾಗಿದೆ ಎಂದು ತಿಳಿಸಿದರು.ಇನ್ನು ಈ ಬಸ್ಸುಗಳು ನಗರದ 18 ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಅನೇಕ ಬಸ್ಗಳು ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುತ್ತವೆ ಅಂತಾ ಹೇಳಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ