ರಾತ್ರಿ ಪ್ರಯಾಣಿಸುವವರಿಗೆ ಸಿಹಿಸುದ್ದಿ ನೀಡಿದ ಬಿಎಂಟಿಸಿ

ಶುಕ್ರವಾರ, 8 ಸೆಪ್ಟಂಬರ್ 2023 (12:07 IST)
ಬೆಂಗಳೂರು : ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿಹಿ ಸುದ್ದಿಯನ್ನು ನೀಡಿದೆ. ಹೌದು, ನೈಟ್ ಸರ್ವಿಸ್ ಬಸ್ಗಳಲ್ಲಿಯೂ ಕೂಡ ಸಾಮಾನ್ಯ ಶುಲ್ಕ ಪಡೆಯಲು ನಿರ್ಧಾರ ಮಾಡಿದೆ.
 
ಈ ಹಿಂದೆ 2001 ರಿಂದ ಬಿಎಂಟಿಸಿಯ ರಾತ್ರಿವೇಳೆಯಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 4 ರವರೆಗೆ ಸಂಚಾರ ಮಾಡುವ ಸಾಮಾನ್ಯ ಸಾರಿಗೆಯ ಬಸ್ಸುಗಳಲ್ಲಿ ಒನ್ ಅಂಡ್ ಆಫ್ ಚಾರ್ಜ್ ಅಂದರೆ ಒಂದುವರೆ ಪಟ್ಟು ಹಣ ಪಡೆಯುತ್ತಿದ್ದ ಬಿಎಂಟಿಸಿ ನಿಗಮ. ಇಂದಿನಿಂದ ಆ ಹಿಂದಿನ ದರವನ್ನು ಕೈಬಿಟ್ಟು ನಾರ್ಮಲ್ ದರವನ್ನು ಪಡೆಯಲು ಬಿಎಂಟಿಸಿ ನಿಗಮ ಆದೇಶ ಮಾಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ರಜತ ಮಹೋತ್ಸವ ಸಮಯದಲ್ಲಿ ಪ್ರಯಾಣಿಕರಿಗಾಗಿ ಹೊಸ ಅಪ್ಲಿಕೇಶನ್ ಒಂದನ್ನು ಲಾಂಚ್ ಮಾಡುತ್ತಿದೆ ಎಂದು ಡಿಹೆಚ್ ವರದಿ ಮಾಡಿದೆ. ಹೌದು, ಈ ಅಪ್ಲಿಕೇಶನ್ ಮೂಲಕ ಬಸ್ನ್ನು ಟ್ರ್ಯಾಕ್ ಮಾಡಬಹುದು, ನಮ್ಮ ನಿಲ್ದಾಣಕ್ಕೆ ಬಸ್ ಎಷ್ಟು ಗಂಟೆಗೆ ಬರಬಹುದು ಜೊತೆಗೆ ಮುಂಗಡ ಟಿಕೆಟ್ ಖರೀದಿಸಲು ಇನ್ನಿತರ ಸೇವೆಗಳನ್ನು ಇದರಲ್ಲಿ ಪಡೆಯಬಹುದಾಗಿದೆ.

ಇಂದು ಸಾರಿಗೆ ಸಿಬ್ಬಂದಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಹಿ ಸುದ್ದಿ ನೀಡಿದ್ದಾರೆ. ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ 4 ಕೋಟಿ 7 ಲಕ್ಷ ರೂ. ಕೊಡಲಾಗಿತ್ತು. ಈ ಬಾರಿ 17 ಕೋಟಿ ರೂ. ಮೀಸಲಿಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ