ಖಾಸಗಿ ಸಾರಿಗೆಯಿಂದ ಹಗಲು ದರೋಡೆ

ಸೋಮವಾರ, 4 ಸೆಪ್ಟಂಬರ್ 2023 (20:04 IST)
ಹಬ್ಬಕ್ಕೆ ಊರಿಗೆ ತೆರಳೋರಿಗೆ ಖಾಸಗಿ‌ ಬಸ್‌ ಮಾಲೀಕರು ಟಿಕೆಟ್ ದರ ಏರಿಕೆಯ ಶಾಕ್ ಕೊಟ್ಟಿದ್ದಾರೆ. ಪ್ರತಿಭಾರಿ ಹಬ್ಬದ ಸಮಯದಲ್ಲಿ ಬಸ್‌ ಟಿಕೆಟ್ ದರ ಹೆಚ್ಚಳ ಮಾಡ್ತಿರೋ ಖಾಸಗಿ ಬಸ್ ಮಾಲೀಕರು, ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೂ ಟಿಕೆಟ್ ದರ ಹೆಚ್ಚಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕ್ತಿದ್ದಾರೆ. ಪ್ರತಿನಿತ್ಯಕ್ಕಿಂತ ಮೂರು ಪಟ್ಟು ಹೆಚ್ಚು ಟಿಕೆಟ್ ದರ ಹೆಚ್ಚಿಸಿದ್ದು, 700ರೂಪಾಯಿ ಇದ್ದ ಟಿಕೆಟ್ ದರ 2500 ರಿಂದ 3000ದವರೆಗೆ ಹೆಚ್ಚಿಸಲಾಗಿದೆ.ಇದರಿಂದ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದು, ಕೂಡಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳದ ವಿರುದ್ಧ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ