3 ಲಕ್ಷ ರೂ. ದಂಡ ಹಾಕಿಸಿಕೊಂಡ ಬೈಕ್‌ ಸವಾರ!

geetha

ಭಾನುವಾರ, 11 ಫೆಬ್ರವರಿ 2024 (20:00 IST)
ಬೆಂಗಳೂರು : ದ್ವಿಚಕ್ರ ವಾಹನ ಸವಾರನೊಬ್ಬ ಬರೋಬ್ಬರಿ ಮೂರು ಲಕ್ಷ ರೂ. ದಂಡ ತೆರಬೇಕಾದ ಪ್ರಸಂಗ ಎದುರಾಗಿದೆ.ಸಂಚಾರ ನಿಯಮ ಉಲ್ಲಂಘನೆ ಮಾಡಿದ  ಈತನ ವಿರುದ್ದ ಸುಮಾರು 300 ಕ್ಕೂ ಹೆಚ್ಚು ಪ್ರಕರಣಗಳಿದ್ದು, ನಗರದಲ್ಲೇ ಅತಿ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ದಾಖಲೆಗೆ ಈ ವ್ಯಕ್ತಿ ಪಾತ್ರನಾಗಿದ್ದಾನೆ. ಸುಧಾಮ ನಗರ ನಿವಾಸಿ ವೆಂಕಟ್ರಾಮನ್‌ ತನ್ನ KA05-KF7969 ಸಂಖ್ಯೆಯ ಹೋಂಡಾ ಆಕ್ಟಿವಾದಲ್ಲಿ ನಗರಾದ್ಯಂತ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. 

ಈತನ ಮನೆಗೆ ತೆರಳಿ ದಂಡ ಕಟ್ಟಿಸಿಕೊಳ್ಳಲು ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ. ಸಿಗ್ನಲ್‌ ಜಂಪ್‌, ಒನ್‌ ವೇ ಡ್ರೈವಿಂಗ್‌, ಹೆಲ್ಮೆಟ್‌ ರಹಿತ ಚಾಲನೆಯಲ್ಲಿಯೂ ವೆಂಕಟ್ರಾಮನ್‌ ದಾಖಲೆ ಬರೆದಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ