ಈ ವರ್ಷವೂ ವಿದ್ಯಾರ್ಥಿಗಳಿಗೆ ಪಠ್ಯ ಕಡಿತ

ಬುಧವಾರ, 14 ಜುಲೈ 2021 (12:18 IST)
ಬೆಂಗಳೂರು: ಕೊರೋನಾದಿಂದಾಗಿ ಇನ್ನೂ ಭೌತಿಕ ತರಗತಿಗಳು ಆರಂಭವಾಗದ ಹಿನ್ನಲೆಯಲ್ಲಿ ಈ ವರ್ಷವೂ ಪಠ್ಯ ಕಡಿತಕ್ಕೆ ರಾಜ್ಯ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.


ಕಳೆದ ವರ್ಷ ಆಫ್ ಲೈನ್ ತರಗತಿಗಳು ತಡವಾಗಿ ಆರಂಭವಾದ ಹಿನ್ನಲೆಯಲ್ಲಿ ಶೇ.30 ರಷ್ಟು ಪಠ್ಯ ಕಡಿತ ಮಾಡಲಾಗಿತ್ತು. ಈ ವರ್ಷವೂ ಅದೇ ಕತೆಯಾಗಿರುವುದರಿಂದ ಮತ್ತೆ ಶೇ.30 ರಷ್ಟು ಪಠ್ಯ ಕಡಿತವಾಗಲಿದೆ.

ಕಳೆದ ವರ್ಷ ದ್ವಿತೀಯ ಪಿಯುಸಿ, ಎಸ್ಎಸ್ಎಸ್ ಎಲ್ ಸಿ ಸೇರಿದಂತೆ ಎಲ್ಲಾ ಮಕ್ಕಳ ಪಠ್ಯ ಕಡಿತ ಮಾಡಲಾಗಿತ್ತು. ಇನ್ನೀಗ ನಡೆಯಲಿರುವ ಎಸ್ಎಸ್ಎಲ್ ಸಿ ಪರೀಕ್ಷೆ ಕೂಡಾ ಶೇ.70 ಪಠ್ಯಕ್ಕೆ ಅನುಗುಣವಾಗಿಯೇ ನಡೆಯಲಿದೆ. ಈ ವರ್ಷವೂ ಇದೇ ಕ್ರಮ ಮುಂದುವರಿಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ