ಸುಮಲತಾ ವಿರುದ್ಧ ಎಚ್ ಡಿಕೆ ಫ್ಯಾನ್ಸ್ ಫೋಟೋ ವಾರ್

ಸೋಮವಾರ, 12 ಜುಲೈ 2021 (09:45 IST)
ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಮಾಜಿ ಸಿಎಂ, ಜೆಡಿಎಸ್ ನಾಯಕ ಕುಮಾರಸ್ವಾಮಿ ಬೆಂಬಲಿಗರು ಫೋಟೋ ವಾರ್ ನಡೆಸಿದ್ದಾರೆ.


ಇಬ್ಬರು ನಾಯಕರ ನಡುವಿನ ಮಾತಿನ ಜಟಾಪಟಿ ಸಂದರ್ಭದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳು ಎಚ್ ಡಿಕೆ ಕೈ ಕಟ್ಟಿ ನಿಂತಿರುವ ಫೋಟೋ ಪ್ರಕಟಿಸಿ, ಅಂಬಿ ಮುಂದೆ ಎಚ್ ಡಿಕೆ ವಿಧೇಯರಾಗಿದ್ದರು. ಈಗ ನಾಲಿಗೆ ಹರಿಯಬಿಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದರು.

ಇದಕ್ಕೀಗ ಎಚ್ ಡಿಕೆ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ. ಎಚ್ ಡಿಕೆ ಕೈ ಕಟ್ಟಿಕೊಂಡು ನಿಂತಿರುವ ವಿವಿಧ ಸಂದರ್ಭಗಳ ನೂರಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವ ಫ್ಯಾನ್ಸ್, ಇದು ನಮ್ಮ ಕುಮಾರಣ್ಣನ ಸಂಸ್ಕೃತಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ