ಟ್ವಿಟರ್ ನಲ್ಲಿ ಮುಂದುವರಿದ ಸುಮಲತಾ ಟಾಕ್ ವಾರ್

ಭಾನುವಾರ, 11 ಜುಲೈ 2021 (10:49 IST)
ಬೆಂಗಳೂರು: ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಟ್ವಿಟರ್ ನಲ್ಲಿ ತಮ್ಮ ಟಾಕ್ ವಾರ್ ಮುಂದುವರಿಸಿದ್ದಾರೆ.


ಜೆಡಿಎಸ್ ನಾಯಕರ ಜೊತೆ ಮಾತಿನ ಚಕಮಕಿಯಾದ ಬಳಿಕ ಕೊಂಚ ಮಟ್ಟಿಗೆ ಕದನ ವಿರಾಮ ಘೋಷಿಸಿದ್ದ ಎರಡೂ ಕಡೆಯ ನಾಯಕರು ಇದೀಗ ಸಾಮಾಜಿಕ ಜಾಲತಾಣದ ಮೂಲಕ ಮಾತು ಮುಂದುವರಿಸಿದ್ದಾರೆ.

ಟ್ವಿಟರ್ ನಲ್ಲಿ ಸೇವ್ ಕೆಆರ್ ಎಸ್, ಸ್ಟಾಪ್ ಇಲ್ಲೀಗಲ್ ಮೈನಿಂಗ್ ಎಂದು ಹ್ಯಾಶ್ ಟ್ಯಾಗ್ ನಡಿಯಲ್ಲಿ ಕಿಡಿ ಕಾರಿರುವ ಸುಮಲತಾ ಬೇರೆಯವರಿಗೆ ಗಂಧ ಹಚ್ಚಲು ಹೊರಟರೆ ಮೊದಲು ನಮ್ಮ ಕೈಗೆ ಗಂಧವಾಗುತ್ತದೆ, ಬೇರೆಯವರಿಗೆ ಕೆಸರು ಹೆಚ್ಚಲು ಹೊರಟರೆ ನಮ್ಮ ಕೈ ಮೊದಲು ಕೆಸರಾಗುತ್ತದೆ ಎಂದು ಪರೋಕ್ಷವಾಗಿ ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ