ನಾಗಮಣಿ ಎಂದು ನಂಬಿಸಿ 30 ಲಕ್ಷ ರೂ. ಪಂಗನಾಮ!

ಬುಧವಾರ, 28 ಜುಲೈ 2021 (15:20 IST)
ಅದೃಷ್ಟ ತರುವ ನಾಗಮಣಿ ಎಂದು ನಕಲಿ ಮಣಿಯನ್ನು ತೋರಿಸಿ ಬೆಂಗಳೂರಿನ ನಿವಾಸಿಗಳಿಗೆ 30 ಲಕ್ಷ ರೂ. ವಂಚಿಸಿದ ಇಬ್ಬರನ್ನು ಬಂಧಿಸಲಾಗಿದೆ.
ಹನೂರು ತಾಲೂಕಿನ ಯರಂಬಾಡಿ ಗ್ರಾಮದ ಸಣ್ಣಪ್ಪಗೌಡ ಕೂಡಲೂರು ಗ್ರಾಮದ ತಂಗವೇಲು ಬಂಧಿತ ಆರೋಪಿಗಳು. ಸರಗೂರು ಗ್ರಾಮದ ರಾಜು ಎಂಬ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು, ಇವರು ನಾಗಾಮಣಿ ಎಂದು ನಕಲಿ ಮಣಿಯನ್ನು ಬರೋಬ್ಬರಿ 30 ಲಕ್ಷ ರೂ.ಗೆ ಮಾರಾಟ ಮಾಡಿದ್ದರು.
ನಾಗಮಣಿ ಅದೃಷ್ಟದ ಹರಳು ಪೂಜೆ ಸಲ್ಲಿಸಿದರೆ ವ್ಯಾಪಾರ, ವಹಿವಾಟಿನಲ್ಲಿ ಕೋಟ್ಯಂತರ ರೂ. ಲಾಭ ಬರಲಿದೆ ಎಂದು ನಂಬಿಸಿ ಬೆಂಗಳೂರಿನ ನಿವಾಸಿಗಳಾದ ರವಿ ಮತ್ತು ಮಹೇಶ್ ರವರಿಗೆ ನಂಬಿಸಿ ವಂಚಿಸಿದ್ದರು.
ನಾಗಮಣಿ ನಕಲಿ ಹರಳು ಎಂದು ತಿಳಿದು ರವಿ ಮತ್ತು ಮಹೇಶ್ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಾರ್ಯಚರಣೆ ನಡೆಸಿದ ಪೊಲೀಸರು ಇಬ್ಬರ ಬಂಧಿಸಿ 4 ಲಕ್ಷ ರೂ.ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ