ರಾಜ್ಯದಲ್ಲಿ ಶೇ.35 ರಷ್ಟು ಮಳೆ ಕೊರತೆ

ಶುಕ್ರವಾರ, 17 ನವೆಂಬರ್ 2023 (15:00 IST)
ರಾಜ್ಯದಲ್ಲಿ ಇದುವರೆಗೆ ಶೇ. 35ರಷ್ಟು ಮಳೆ ಕೊರತೆ ಆಗಿದ್ದು, ಮಳೆ ಕೊರತೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಕೊಡಗು, ಹಾಸನ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ, ಮುಂದುವರಿದಿದೆ.

ದಕ್ಷಿಣ ಕನ್ನಡದಲ್ಲಿ ಶೇ. 9, ಮೈಸೂರಿನಲ್ಲಿ ಶೇ. 49, ಕೊಡಗು ಶೇ. 18, ಹಾಸನ ಶೇ. 13ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಬೆಂಗಳೂರಿನಲ್ಲಿ ಶೇ. 17, ಉಡುಪಿಯಲ್ಲಿ ಶೇ. 25, ಉತ್ತರ ಕನ್ನಡ ಶೇ. 19, ಬೆಂ. ಗ್ರಾಮಾಂತರ ಶೇ. 16, ಬಳ್ಳಾರಿಯಲ್ಲಿ ಶೇ. 86, ರಾಯಚೂರು, ಯಾದಗಿರಿ ಶೇ. 82, ಬಾಗಲಕೋಟೆ ಶೇ. 85, ವಿಜಯಪುರ ಶೇ. 77, ಬೀದರ್ ಶೇ. 79, ಕಲಬುರಗಿ, ಹಾವೇರಿ ತಲಾ ಶೇ. 64, ಧಾರವಾಡ ಶೇ. 60, ಬೆಳಗಾವಿ ಶೇ. 79, ಕೋಲಾರ ಜಿಲ್ಲೆಯಲ್ಲಿ ಶೇ. 57ರಷ್ಟು ಮಳೆ ಕೊರತೆ ಇರುವುದನ್ನು ಹವಾಮಾನ ಇಲಾಖೆ ದೃಢಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ