ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ತತ್ತರ

ಗುರುವಾರ, 9 ನವೆಂಬರ್ 2023 (14:20 IST)
ನಗರದ ಯಲಹಂಕದ ಕೋಗಿಲೆ ಕ್ರಾಸ್ ಬಳಿ ಬೃಹತ್ ಮಟ್ಟದಲ್ಲಿ ನೀರು ಹರಿಯುತ್ತಿದೆ.ಮುಖ್ಯ ರಸ್ತೆಯಲ್ಲಿ ಮಂಡಿ ಅಷ್ಟು ನೀರು ಇದ್ರು ಪಾಲಿಕೆಯಿಂದ ತೆರವು ಮಾಡಿಲ್ಲ.ಜನರ ಓಡಾಟಕ್ಕೂ ತೊಂದ್ರೆಯಾಗಿದ್ದು,ಪಾಲಿಕೆಗಮನ ಹರಿಸದೇ ನಿರ್ಲಕ್ಷ್ಯ ತೋರಿದೆ.
 
ನೀರಲ್ಲಿ ಸಿಲುಕಿ ವಾಹನ ಸವಾರರು ಪರದಾಟ ನಡೆಸಿದ್ದಾರೆ.ಆದ್ರೆ ಚಳಿಕೆ ಪಾಲಿಕೆ ಅಧಿಕಾರಿಗಳು ಮನೇಲಿ ಬೆಚ್ಚನೆ ನಿದ್ದೆ  ಮಾಡಿದ್ದಾರೆ.ಸ್ಥಳಕ್ಕೆ ಬಾರದ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.ಪ್ರತಿ ಸರಿ ಮಳೆ ಬಂದಾಗ ಇದೆ ಇಲ್ಲಿನ ಜನರ ಪರಿಸ್ಥಿತಿ.ರಸ್ತೆಯಲ್ಲಿ ಓಡಾಡೋಕೆ ಆಗದೆ ಪಕ್ಕದಲ್ಲಿ ಇದ್ದ ಕಾಂಪೌಂಡ್ ಜಿಗಿದು ಜನರು ಹೋಗುತ್ತಿದ್ದಾರೆ.

ನೂರಾರು ಭಾರಿ ದೂರು ಕೊಟ್ರು ಪಾಲಿಕೆ ಕ್ಯಾರೇ ಅನ್ನುತ್ತಿಲ್ಲ.ಕಳೆದ ಕೆಲದಿನಗಳಹಿಂದಷ್ಟೇ ಪಾಲಿಕೆ ಆಯುಕ್ತರು ಸಹ ಬಂದು ಪರಿಶೀಲನೆ ಮಾಡಿದ್ರು.ಆದ್ರೆ ಹೆಸರಿಗೆ ಮಾತ್ರ ಬಂದು ನೋಡಿ ಜನರ ಪ್ರಶ್ನೆಗೆ ಉತ್ತರ ನೀಡದೆ ಹೋಗಿದ್ರು.ಆದ್ರೂ ಸಹ ಯಾವುದೇ ಕ್ರಮ ಆಗಿಲ್ಲ.ಇತ್ತ ಪಾಲಿಕೆ ನಿರ್ಲಕ್ಷ್ಯಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ