ಬಿಡಿಎ ಮಧ್ಯವರ್ತಿ ಮೋಹನ್ ಮನೆಯಲ್ಲಿ ಇಂದು 4.5 ಕೆಜಿ ಚಿನ್ನ ಪತ್ತೆ!

ಮಂಗಳವಾರ, 22 ಮಾರ್ಚ್ 2022 (19:33 IST)
ಬಿಡಿಎ (ಬಿಡಿಎ) ಮಧ್ಯವರ್ತಿ ಮೋಹನ್ ಕುಮಾರ್ ಮನೆ ಮೇಲೆ ಎಸಿಬಿ (ಎಸಿಬಿ) ಅಧಿಕಾರಿಗಳು ಇಂದು (ಮಾರ್ಚ್ 22) ಬೆಳ್ಳಂಬೆಳಗ್ಗೆ ದಾಳಿ. ಮೋಹನ್ ವಿರುದ್ಧ ಭ್ರಷ್ಟಾಚಾರ, ಅವ್ಯವಹಾರದ ಆರೋಪದ ಹಿನ್ನೆಲೆ ಆರ್.ಟಿ.ನಗರದ ಮನೋರಾಯನಪಾಳ್ಯದಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ. ದಾಳಿ ವೇಳೆ ಬರೋಬ್ಬರಿ 4.5 ಕೆಜಿ ಚಿನ್ನ ಇದೆ. ಐಷಾರಾಮಿ ಮನೆಯಲ್ಲಿ ಎರಡೂವರೆ ಕೋಟಿ ಮೌಲ್ಯದ ಚಿನ್ನವಿದೆ. ಮೋಹನ್ ಅಧಿಕಾರಿಗಳ ಜತೆ ಶಾಮೀಲಾಗಿ ಅಕ್ರಮ ನಡೆಸಿರುವ ಆರೋಪ ಕೇಳಿಬಂದಿದೆ.
 
ಜೊತೆಗೆ ಮೋಹನ್ ಕುಮಾರ್ ಅವರ ಮನೆಯಲ್ಲಿ ಕಂತೆ ಕಂತೆ ಹಣವೂ ಇದೆ. ಅಪಾರ ಪ್ರಮಾಣದ ಬೆಳ್ಳಿ ತಟ್ಟೆ, ಲೋಟ, ಬಟ್ಟಲು, ದೀಪ, ಚಿನ್ನದ ಸರ, ಚಿನ್ನದ ಓಲೆ, ಚಿನ್ನ ಡಾಬು ಸಿಕ್ಕಿದೆ. 9 ಜನ ಎಸಿಬಿ ಅಧಿಕಾರಿಗಳ ತಂಡದಿಂದ ಶೋಧಕಾರ್ಯ ಮುಂದುವರಿದಿದೆ. ಎಸಿಬಿ ಡಿವೈಎಸ್ಪಿ ಪ್ರಕಾಶ್ ರೆಡ್ಡಿ, ಇನ್ಸ್ ಪೆಕ್ಟರ್ ಮಂಜುನಾಥ್ ಸೇರಿದಂತೆ 9 ಅಧಿಕಾರಿಗಳ ತಂಡದಿಂದ ಶೋಧಕಾರ್ಯ ನಡೆಯುತ್ತಿದೆ.ಅವ್ಯವಹಾರದಲ್ಲಿ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಏಕಕಾಲದಲ್ಲಿ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ, 9 ಕಡೆ ದಾಳಿ ನಡೆದಿದೆ. ಚಾಮರಾಜಪೇಟೆಯ ಬಿ.ಎನ್.ರಘು, ಆರ್.ಟಿ.ನಗರ ಬಳಿಯ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಆರ್.ಆರ್.ನಗರದ ತೇಜು, ಮಲ್ಲತ್ತಹಳ್ಳಿಯ ಮುನಿರತ್ನ ಅಲಿಯಾಸ್ ರತ್ನವೇಲು, ಮುದ್ದಿನಪಾಳ್ಯದ ಅಶ್ವತ್ಥ ಹಾಗೂ ಚಿಕ್ಕಹನುಮಯ್ಯ, ಚಾಮುಂಡೇಶ್ವರಿನಗರದ ರಾಮು ಮತ್ತು ಚಾಮುಂಡೇಶ್ವರಿ ನಗರಗಳ ಮೇಲೆ ದಾಳಿ ನಡೆಸಿದ ಸಿ.ಬಿ.
 
ಪೆಪರ್, ಹಾಲು ಹಾಕುತ್ತಿದ್ದ ಮೋಹನ್:
ಮೋಹನ್ ಕುಮಾರ್ ದೊಡ್ಡಬಳ್ಳಾಪುರದ ಮಳವಳ್ಳಿ ಗ್ರಾಮದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮುಗಿಸಿದ್ದಾರೆ. ಇವರು ಬೆಂಗಳೂರಿನಲ್ಲಿ ಪೆಪರ್, ಹಾಲು ವಿತರಣೆ ಮಾಡುತ್ತಿದ್ದಾರೆ. ಬಳಿಕ ಬಿಡಿಎ ಅಧಿಕಾರಿಯ ಒಬ್ಬರಿಗೆ ಚಾಲಕನಾಗಿರು. ಅಲ್ಲಿಂದ ಬಿಡಿಎ ಜೊತೆಗೆ ನಂಟು ಶುರುವಾಗಿದೆ. ಇವರಿಗೆ ಎರಡು ಮದುವೆ ಆಗಿದೆ. ಈಗ ಇರುವ ಖುಷಿ ಮನೆ ಮೊದಲ ಹೆಂಡತಿಗಾಗಿ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಸದ್ಯ ಮೊದಲನೆಯ ಹೆಂಡತಿ ಜೊತೆ ಡಿವೋರ್ಸ್ ಆಗಿದೆ. ಎರಡು ಹೆಂಡತಿ ಜೊತೆಗೆ ಜೀವನ ಮಾಡುತ್ತಿದ್ದಾರೆ.ಮನೆಯ ಪಕ್ಕದಲ್ಲಿ ಒಂದು ಫುಲ್ ಸೈಟ್ ಕೂಡ ಇದೆ 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ