2024ರಲ್ಲಿ ದೆಹಲಿಯಲ್ಲಿ 4,533 ಡೆಂಗ್ಯೂ ಪ್ರಕರಣ, ಮೂರು ಸಾವು

Sampriya

ಸೋಮವಾರ, 11 ನವೆಂಬರ್ 2024 (16:20 IST)
Photo Courtesy X
ನವದೆಹಲಿ: ಇಲ್ಲಿನ ಮುನ್ಸಿಪಲ್ ಕಾರ್ಪೊರೇಶನ್‌ನ ವೆಕ್ಟರ್-ಬೋರ್ನ್ ಡಿಸೀಸ್(ವಿಬಿಡಿ) ವರದಿಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಈ ವರ್ಷದ ಆರಂಭದಿಂದ 4,533 ಡೆಂಗ್ಯೂ ಪ್ರಕರಣಗಳು ಮತ್ತು ಮೂರು ಸಾವು ಪ್ರಕರಣಗಳು ದಾಖಲಾಗಿದೆ ಎಂದು ವರದಿಯಾಗಿದೆ.

2023 ರಲ್ಲಿ ದೆಹಲಿಯಲ್ಲಿ ಒಟ್ಟು 9,266 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದರೆ, ಸಾವಿನ ಸಂಖ್ಯೆ 19 ಆಗಿದೆ ಎಂದು ವರದಿ ತಿಳಿಸಿದೆ. 2024ರಲ್ಲಿ ಇಲ್ಲಿಯವರೆಗೆ ದೆಹಲಿಯಲ್ಲಿ 4,533 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ನವೆಂಬರ್ ತಿಂಗಳಿನಲ್ಲಿಯೇ 472 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು 2,431 ದಾಖಲಾಗಿವೆ.

ನಜಾಫ್‌ಗಢ್, ದಕ್ಷಿಣ ದೆಹಲಿ, ಶಹದಾರ (ಉತ್ತರ), ಕರೋಲ್ ಬಾಗ್ ಮತ್ತು ಮಧ್ಯ ದೆಹಲಿ ಈ ವರ್ಷ ಡೆಂಗ್ಯೂ ಪ್ರಕರಣಗಳಿಗೆ ಪ್ರಮುಖ ಕೊಡುಗೆ ನೀಡಿವೆ. ಮಲೇರಿಯಾಕ್ಕೆ ಸಂಬಂಧಿಸಿದಂತೆ, 2024 ರಲ್ಲಿ, ದಾಖಲಾದ ಪ್ರಕರಣಗಳು 728ರಷ್ಟಿದೆ, ಯಾವುದೇ ಸಾವುಗಳು ದಾಖಲಾಗಿಲ್ಲ ಎಂದು ವರದಿ ಹೇಳಿದೆ. ರಾಷ್ಟ್ರ ರಾಜಧಾನಿಯಲ್ಲಿ ಇದುವರೆಗೆ 172 ಚಿಕೂನ್‌ಗುನ್ಯಾ ಪ್ರಕರಣಗಳು ದಾಖಲಾಗಿವೆ.

ವರದಿಯ ಪ್ರಕಾರ, ಈ ವರ್ಷ, ಸರ್ಕಾರವು 23,61,013 ಮನೆಗಳಿಗೆ ಸಿಂಪರಣೆ ಮಾಡಿದ್ದು, 2,74,290 ಮನೆಗಳಲ್ಲಿ ಸೊಳ್ಳೆಗಳ ಪಾಸಿಟಿವ್ ಕಂಡುಬಂದಿದೆ. ಸೊಳ್ಳೆಗಳ ಕಾರಣಕ್ಕಾಗಿ 1,56,265 ಮಂದಿಗೆ ಲೀಗಲ್ ನೋಟಿಸ್ ಕೂಡ ನೀಡಿದೆ.

ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕೇಂದ್ರದ ಪ್ರಕಾರ, ಡೆಂಗ್ಯೂ ವೇಗವಾಗಿ ಹೊರಹೊಮ್ಮುವ, ಏಕಾಏಕಿ ಹರಡುವ ಮತ್ತು ಸೊಳ್ಳೆಯಿಂದ ಹರಡುವ ವೈರಲ್ ಜ್ವರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ರಾಜ್ಯಗಳು ಮತ್ತು ಹೊಸ ಪ್ರದೇಶಗಳಿಂದ ಪುನರಾವರ್ತಿತ ಏಕಾಏಕಿ ಡೆಂಗ್ಯೂ ಸಂಭವವು ಹೆಚ್ಚುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ