ರಾಜಕೀಯದಲ್ಲಿ ಒಬ್ಬರನ್ನು ಮುಗಿಸುವುದರಲ್ಲಿ ದೇವೇಗೌಡರು ನಿಸ್ಸಿಮರು: ಸಿಎಂ ಸಿದ್ದರಾಮಯ್ಯ

Sampriya

ಸೋಮವಾರ, 11 ನವೆಂಬರ್ 2024 (16:17 IST)
ರಾಮನಗರ: ಕರ್ನಾಟಕ ಮೂರು ಕ್ಷೇತ್ರಗಳ ಉಪ ಚುನಾವಣೆ ಕಾವು ದಿನೇ ದಿನೇ ರಂಗೇರುತ್ತಿದ್ದು, ಇಂದು ಬಹಿರಂಗ ಪ್ರಚಾರ ಸಂಜೆ 6ಕ್ಕೆ ಅಂತ್ಯವಾಗಲಿದೆ.  ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲ್ಲೂಕಿನ ದೊಡ್ಡಮಳೂರಿನಲ್ಲಿ ಕಾಂಗ್ರೆಸ್‌ ಸಮಾವೇಶದಲ್ಲಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ದೇವೇಗೌಡರು ಯಾವ ಒಕ್ಕಲಿಗ ನಾಯಕರನ್ನು ಬೆಳೆಸುವುದಿಲ್ಲ. ಅವರು ರಾಜಕೀಯವಾಗಿ ಇನ್ನೊಬ್ಬರನ್ನು ಮುಗಿಸುವುದರಲ್ಲಿ ಮತ್ತು ದ್ವೇಷ ರಾಜಕಾರಣ ಮಾಡುವುದರಲ್ಲಿ ನಂಬರ್ 1 ಎಂದು ಸಿದ್ದರಾಮಯ್ಯ ಅವರು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯನನ್ನು ನಾನು ಸಿಎಂ ಮಾಡಿದೆ ಅಂತ ಹೇಳುತ್ತಾರೆ. ಮಿಸ್ಟರ್ ದೇವೇಗೌಡ ನಿನ್ನನ್ನು ಸಿಎಂ ಮಾಡಿದ್ದು ಯಾರು? ನಾನು ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದರು.

ಅಳೋದು ನಮ್ಮ ಪರಂಪರೆ, ವಂಶಪಾರಂಪರ್ಯ ಅಂತಾರೆ, ಪಾಪ ಆ ನಿಖಿಲ್ ಗೂ ಅಳೋದನ್ನು ಕಲಿಸಿಬಿಟ್ಟಿದ್ದಾರೆ. ಹಾಸನದಲ್ಲಿ ನೀವು ಅಳಬೇಕು. ಅಲ್ಲಿ ಹೋಗಿ ದೇವೇಗೌಡ, ಕುಮಾರಸ್ವಾಮಿ ಅಳಬೇಕು. ಆದರೆ ಪಾಪ ಆ ಹೆಣ್ಣುಮಕ್ಕಳು ಅಳುತ್ತಿದ್ದಾರೆ. ದಯವಿಟ್ಟು ನೀವು ಯಾರೂ ಅವರ ಕಣ್ಣೀರಿಗೆ ಮರುಳಾಗಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ನಾನು ಎರಡನೇ ಬಾರಿ ಸಿಎಂ ಸ್ಥಾನದಲ್ಲಿರುವುದಕ್ಕೆ ದೇವೇಗೌಡ ಅವರಿಗೆ ಹೊಟ್ಟೆ ಉರಿ. ದೇವೇಗೌಡರೇ ನಿಮ್ಮ ಹೊಟ್ಟೆ ಉರಿ ನಿಮ್ಮನ್ನೇ ಸುಡುತ್ತದೆ ಎಂದು ಸಿದ್ದರಾಮಯ್ಯ, ಮಾಜಿ ಪ್ರಧಾನಿ ವಿರುದ್ಧ ಕಿಡಿ ಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ